ಮೊಬೈಲ್ ಬ್ಯಾಲೆನ್ಸ್ ಇನ್ನು ಚಿಂತೆ ಬಿಡಿ!

7

ಮೊಬೈಲ್ ಬ್ಯಾಲೆನ್ಸ್ ಇನ್ನು ಚಿಂತೆ ಬಿಡಿ!

Published:
Updated:
ಮೊಬೈಲ್ ಬ್ಯಾಲೆನ್ಸ್ ಇನ್ನು ಚಿಂತೆ ಬಿಡಿ!

ಅಯ್ಯೋ ಅರ್ಜೆಂಟ್ ಕರೆ ಮಾಡಬೇಕಿತ್ತು. ಮೊಬೈಲ್ ದೂರವಾಣಿಯಲ್ಲಿ ಬ್ಯಾಲೆನ್ಸೇ ಇಲ್ಲವಲ್ಲ . ಏನು ಮಾಡೋದು? ಹತ್ತಿರದಲ್ಲಿ ಎಲ್ಲೂ ರೀಚಾರ್ಜ್ ಅಂಗಡಿ ಬೇರೆ ಇಲ್ಲ. ಅಯ್ಯೋ ದೇವರೇ' ಎಂದುಕೊಂಡು ಎಷ್ಟೋ ಸಲ ಪ್ರೀಪೇಯ್ಡ ಗ್ರಾಹಕರು ಪಜೀತಿ ಪಡುವುದು ಸಾಮಾನ್ಯ.

ಬೇರೆಯವರ ಬಳಿ ಮೊಬೈಲ್ ಕೇಳುವುದಕ್ಕೂ ಮುಜುಗರ. ಏನೆಂದುಕೊಳ್ಳುತ್ತಾರೆಯೋ ಎನ್ನುವ ಸಂಕೋಚ. ಆದರೆ ನಿಮ್ಮ ಸಮೀಪ ಯಾರದ್ದಾದರೂ ಬಳಿಯಲ್ಲಿ ಮೊಬೈಲ್ ಫೋನ್ ಇದ್ದಲ್ಲಿ ಅವರ ಫೋನ್‌ನಿಂದ ನಿಮ್ಮ ಫೋನ್‌ಗೆ ಹಣ (ಬ್ಯಾಲೆನ್ಸ್) ವರ್ಗಾಯಿಸಿಕೊಳ್ಳಬಹುದು ಎಂಬುದು ಎಷ್ಟೋ ಜನರಿಗೆ ತಿಳಿದೇ ಇಲ್ಲ!ಹೌದು, ಈ ರೀತಿಯೂ ನೀವು ಮಾಡಬಹುದು. ಕರೆ ಮಾಡಲು ಅವರಿಂದ ಫೋನ್ ಕೇಳುವ ಮುಜುಗರವೂ ಇರುವುದಿಲ್ಲ. ನೀವು ಹಣ ನೀಡಿ ಅವರ ಬಳಿಯ ಬ್ಯಾಲೆನ್ಸ್ ನಿಮ್ಮ ಫೋನ್‌ಗೆ ವರ್ಗಾವಣೆ ಮಾಡಿಕೊಳ್ಳಲೂ ಬಹುದು. ಆದರೆ ಒಂದೇ ಒಂದು ಷರತ್ತು- ಇಬ್ಬರ ನೆಟ್‌ವರ್ಕ್ ಒಂದೇ ಆಗಿರಬೇಕು.

ಬಿಎಸ್‌ಎನ್‌ಎಲ್ ಗ್ರಾಹಕರು

GIFT <ನಿಮಗೆ ಬೇಕಾದ ಹಣ> ಹಾಗೂ ನೀವು ಯಾರಿಗೆ ಬ್ಯಾಲೆನ್ಸ್ ಕಳುಹಿಸಬೇಕೋ ಅವರ ಸಂಖ್ಯೆಯನ್ನು `53733'ಗೆ ಎಸ್‌ಎಂಎಸ್ ಮಾಡಿ.

ಉದಾಹರಣೆಗೆ ನೀವು 100 ರೂಪಾಯಿ ಕಳುಹಿಸುತ್ತೀರಿ ಎಂದುಕೊಳ್ಳಿ. ಆಗ  GIFT100    94444444 ಎಂದು ಟೈಪ್ ಮಾಡಿ 53733 ಕಳುಹಿಸಿ.

ವೋಡಾಫೋನ್ ಗ್ರಾಹಕರು

ವೋಡಾಫೊನ್ ಗ್ರಾಹಕರಾಗಿದ್ದರೆ *131*ಅಮೌಂಟ್*ಮೊಬೈಲ್ ಸಂಖ್ಯೆ # ಡಯಲ್ ಮಾಡಿ.

ಉದಾಹರಣೆಗೆ: *131*50*98888888ೞ ಎಂದು ಡಯಲ್ ಮಾಡಿ.

ಏರ್ಸೆಲ್ ಗ್ರಾಹಕರು

ಏರ್ಸೆಲ್ ಗ್ರಾಹಕರು ಕನಿಷ್ಠ 10 ರೂಪಾಯಿಗಳ ಬ್ಯಾಲೆನ್ಸ್ ಕೂಡ ವರ್ಗಾವಣೆ ಮಾಡಿಕೊಳ್ಳಬಹುದು. *122*666#   ಡಯಲ್ ಮಾಡಿದರೆ ನಿಮಗೆ ಮಾಹಿತಿ ಲಭ್ಯ.

ಐಡಿಯಾ ಗ್ರಾಹಕರು

ಐಡಿಯಾದಿಂದ ಬ್ಯಾಲೆನ್ಸ್ ಕಳುಹಿಸಲು ಮೊಬೈಲ್ ಸಂಖ್ಯೆ ಹಾಗೂ ಹಣ ತಿಳಿಸಿ 55567 ಗೆ ಎಸ್‌ಎಂಎಸ್ ಮಾಡಿ.

ಉದಾಹರಣೆಗೆ: GIVE 98888888 100 ಎಂದು ಟೈಪ್ ಮಾಡಿ `55567' ಗೆ ಎಸ್‌ಎಂಎಸ್ ಮಾಡಿ.

ಏರ್‌ಟೆಲ್ ಗ್ರಾಹಕರು

ನೀವು ಏರ್‌ಟೆಲ್ ಗ್ರಾಹಕರಾಗಿದ್ದರೆ  *141# ನಂಬರ್‌ಗೆ ಡಯಲ್ ಮಾಡಿ. ಹಣವನ್ನು ಹೇಗೆ ವರ್ಗಾವಣೆ ಮಾಡಿಕೊಳ್ಳಬಹುದು ಎಂಬ ಮಾಹಿತಿ  ಕಂಪೆನಿಯಿಂದ ನಿಮಗೆ ಸಿಗುತ್ತದೆ.

ರಿಲಯನ್ಸ್ ಗ್ರಾಹಕರು

ಸ್ಟೆಪ್1 : *367*3#   ಡಯಲ್ ಮಾಡಿ.ಮೊಬೈಲ್‌ಗೆ `ಫಸ್ಟ್ ಏಯ್ಡ'

ಬಾತ್‌ರೂಂ, ಟಾಯ್ಲೆಟ್‌ಗೆ ಹೋದ ಸಂದರ್ಭಗಳಲ್ಲಿ  ಅಥವಾ ಕೈತೊಳೆಯುವ ಸಂದರ್ಭದಲ್ಲಿ ಮೊಬೈಲ್ ಫೋನ್ ಕೈಜಾರಿ ನೀರಿನಲ್ಲಿ ಬೀಳಬಹುದು. ಬಿದ್ದ ತಕ್ಷಣ ಕೆಲವು ಫೋನ್‌ಗಳು ಸ್ವಿಚ್ ಆಫ್ ಆದರೆ, ಕೆಲವು ಹ್ಯಾಂಡ್‌ಸೆಟ್ ತಕ್ಷಣವೇ  ಕಾರ್ಯ ಸ್ಥಗಿತಗೊಳಿಸಿ ಬಿಡುತ್ತವೆ. ಆಗ ಅದನ್ನು ರಿಪೇರಿಗೆ ಕೊಡುವ ಬದಲು ನೀವೇ `ಫಸ್ಟ್ ಏಡ್' ನೀಡಿ ಮರುಜೀವ ನೀಡಬಹುದು. ಹೇಗೆ ಎಂಬುದು ನಿಮಗೆ ಗೊತ್ತೆ?ಮೊಬೈಲ್ ಫೋನ್ ತನ್ನಷ್ಟಕ್ಕೆ ತಾನೇ ಸ್ವಿಚ್ ಆಫ್ ಆಗಿರದಿದ್ದರೆ ನೀವು ಮೊದಲಿಗೆ ಮಾಡಬೇಕಾದದ್ದು, ಅದನ್ನು ಸ್ವಿಚ್ ಆಫ್ ಮಾಡುವುದು. (ಒಂದು ವೇಳೆ ಅದು ಆಟೋಮ್ಯಾಟಿಕ್ ಆಗಿ ಸ್ವಿಚ್ ಆಫ್ ಆಗಿದ್ದರೆ ಫೋನ್ ತೇವದಿಂದ ಕೂಡಿರುವಾಗಲೇ ಅದನ್ನು ಸ್ವಿಚ್ ಆನ್ ಮಾಡಲು ಯತ್ನಿಸದಿರಿ. ಏಕೆಂದರೆ ಇಂಥ ಸಂದರ್ಭಗಳಲ್ಲಿ ಷಾರ್ಟ್ ಸರ್ಕಿಟ್ ಆಗುವ ಸಾಧ್ಯತೆ ಇರುತ್ತದೆ). ಸ್ವಿಚ್ ಆಫ್ ಮಾಡಿದ ನಂತರ ಅದರ ಬ್ಯಾಟರಿ, ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ತೆಗೆಯಿರಿ.ನಿಮ್ಮ ಬಳಿ ಟಿಶ್ಯು ಪೇಪರ್ ಇದ್ದರೆ ಅದರಿಂದ ಮೊಬೈಲ್ ಮೇಲೆ ಇರುವ ನೀರನ್ನು ಮೃದುವಾಗಿ ಒರೆಸಿ. ಟಿಶ್ಯು ಪೇಪರ್ ಬಹುಬೇಗ ನೀರನ್ನು ಹೀರಿಕೊಳ್ಳುತ್ತದೆ. ಟಿಶ್ಯು ಪೇಪರ್ ಅನ್ನು ಫೋನ್ ಮೇಲೆ ಒತ್ತಿ ಉಜ್ಜದಿರಿ. ಹೀಗೆ ಮಾಡಿದರೆ ಫೋನಿನ ಚಿಪ್‌ನಲ್ಲಿ ಪೇಪರ್ ತುಣುಕು ಸೇರಿಕೊಂಡು ದೊಡ್ಡ ಸಮಸ್ಯೆ ತಂದೊಡ್ಡಬಹುದು.ನಂತರ, ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿಸಿರಿ. ಅದರಲ್ಲಿ ಫೋನ್, ಬ್ಯಾಟರಿ ಹಾಗೂ ಸಿಮ್ ಪ್ರತ್ಯೇಕವಾಗಿ ಇಡಿ. ಫೋನನ್ನು ಅಕ್ಕಿಯಿಂದ ಸ್ವಲ್ಪ ಹೊರಭಾಗದಲ್ಲಿ ಇಡಿ. ಪಾತ್ರೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಡಬೇಕು. ಅಕ್ಕಿಯು ಬಿಸಿಯಾದಂತೆ ನಿಮ್ಮ ಮೊಬೈಲ್ ಹಾಗೂ ಅದರೊಳಗೆ ಇರುವ ನೀರೂ ಆವಿಯಾಗುತ್ತದೆ.ನಂತರ ಎಲ್ಲ ಬಿಡಿಭಾಗಗಳನ್ನೂ ಒಳಕ್ಕೆ ತಂದು ಮೊಬೈಲ್‌ನ ಆಡಿಯೋ ಪೋರ್ಟ್ ಹಾಗೂ ಜ್ಯಾಕ್‌ನಲ್ಲಿ ಅಕ್ಕಿಕಾಳು ಸೇರಿಲ್ಲ ಎಂಬುದನ್ನು ಖಚಿತಪಡಿಸಿ. ಹೀಗೆ ಆಗದಿದ್ದರೆ ಬ್ಯಾಟರಿ, ಸಿಮ್, ಮೆಮೊರಿ ಕಾರ್ಡ್ ಎಲ್ಲವನ್ನೂ ಜೋಡಿಸಿ ಮೊಬೈಲ್ `ಸ್ವಿಚ್ ಆನ್' ಮಾಡಿ. ನಿಮ್ಮ ಪ್ರೀತಿಯ ಮೊಬೈಲ್ ಫೋನ್ ಮೊದಲಿನಂತೆಯೇ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry