ಮೊಬೈಲ್ ಮಾತು

7

ಮೊಬೈಲ್ ಮಾತು

Published:
Updated:

ಐಪಾಡ್‌ನಲ್ಲಿ ಪ್ಲೇಬಾಯ್

ಪುರುಷರ ಅಚ್ಚುಮೆಚ್ಚಿನ ನಿಯತಕಾಲಿಕ ‘ಪ್ಲೇಬಾಯ್’ ಇನ್ನು ಆ್ಯಪಲ್ ಐಪಾಡ್‌ನಲ್ಲಿ ತೆರೆದುಕೊಳ್ಳಲಿದೆ. ‘ಪ್ಲೇಬಾಯ್’ ಸ್ಥಾಪಕ ಹಗ್ ಹೆಫ್‌ನರ್ ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು, ಮಾರ್ಚ್ ವೇಳೆಗೆ ‘ಪ್ಲೇಬಾಯ್‌ನ, ಹಳೆಯ ಮತ್ತು ಹೊಸ ಆವೃತ್ತಿಗಳು ‘ಐಪಾಡ್’ನಲ್ಲಿ ಲಭ್ಯಗೊಳ್ಳಲಿವೆ ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.ಈ ಕುರಿತು ಟ್ವಿಟ್ಟರ್ ಹಿಂಬಾಲಕರೊಬ್ಬರು ಕೇಳಿದ ಪ್ರಶ್ನೆಗೆ  ಉತ್ತರಿಸಿರುವ ಹೆಫ್‌ನರ್, ಇದು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದಷ್ಟೇ ಚುಟುಕಾಗಿ ಉತ್ತರಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ನಡುವೆ, ‘ಇದೊಂದು ವೆಬ್ ಆಧಾರಿತ ಚಂದಾ  ಸೇವೆಯಾಗಿದ್ದು, ಬೌಂಡಿ ಡಿಜಿಟಲ್  ಪ್ರಕಾಶನ ಸಂಸ್ಥೆಯ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತದೆ’ ಎಂದು  ನಿಯತಕಾಲಿಕೆಯ ವಕ್ತಾರೆ ತಿಳಿಸಿದ್ದಾರೆ.‘ಬೆತ್ತಲೆ ಚಿತ್ರ ವೀಕ್ಷಣೆಯನ್ನು ಐಪಾಡ್‌ನಲ್ಲಿ ನಿಷೇಧಿಸಲಾಗಿದೆ. ಅಶ್ಲೀಷ ಚಿತ್ರ-ದೃಶ್ಯಗಳ ಮೇಲೆ ‘ಆ್ಯಪಲ್’ ಬಿಗಿ ನಿಲುವು ತಳೆದಿದೆ. ಹೀಗಾಗಿ ‘ಪ್ಲೇಬಾಯ್’ನ ‘ಬೆತ್ತಲೆಯೇತರ ಚಿತ್ರಗಳು ಮಾತ್ರ ಐಪಾಡ್‌ನಲ್ಲಿ ವೀಕ್ಷಣೆಗೆ ಸಾಧ್ಯ.ಶೇಕಡ 99ರಷ್ಟು ಬೆತ್ತಲೆಯೇತರ  ಚಿತ್ರಗಳನ್ನು ಮಾತ್ರ ಐಪಾಡ್‌ನಲ್ಲಿ ಲಭ್ಯಗೊಳಿಸಲಾಗುವುದು ಎಂದು ವಕ್ತಾರೆ ಹೇಳಿದ್ದಾರೆ.ಮೌಲ್ಯವರ್ಧಿತ ಸೇವೆ: ‘ಟ್ರಾಯ್’ ಸೂಚನೆ

ಮೌಲ್ಯವರ್ಧಿತ  ಮತ್ತು ಗ್ರಾಹಕ ಸ್ನೇಹಿ ಸೇವೆಗಳ ಜಾರಿ ಮತ್ತು ಪ್ರಗತಿಯ ಬಗ್ಗೆ  ಮಾಹಿತಿ ನೀಡುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ವಿವಿಧ ಮೊಬೈಲ್ ದೂರವಾಣಿ ಕಂಪೆನಿಗಳಿಗೆ ಸೂಚನೆ ನೀಡಿದೆ. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ‘ಮೊಬೈಲ್ ಮೌಲ್ಯವರ್ಧಿತ ಸೇವೆಗಳು’ (ಎಂವಿಎಎಸ್) ಕುರಿತು ಅಧ್ಯಯನ ವರದಿ ಬಿಡುಗಡೆ ಮಾಡಿದೆ.ಈ ವರದಿ  ಆಧಾರವಾಗಿಟ್ಟುಕೊಂಡು,  ಗ್ರಾಹಕ ಸೇರ್ಪಡೆಯ ಪ್ರಗತಿ ಮತ್ತು ತಂತ್ರಜ್ಞಾನ ಅಂತರದ ಕುರಿತು ಫೆಬ್ರುವರಿ 11ರ ಒಳಗೆ ಮಾಹಿತಿ ನೀಡುವಂತೆ ‘ಟ್ರಾಯ್’  ಈ ಕಂಪೆನಿಗಳಿಗೆ ಸೂಚನೆ ನೀಡಿದೆ.  ಸದ್ಯ ದೇಶೀಯ ಮೊಬೈಲ್ ದೂರವಾಣಿ ಕಂಪೆನಿಗಳು ಮೌಲ್ಯವರ್ಧಿತ ಸೇವೆಗಳಿಗಾಗಿ ತಮ್ಮ ಒಟ್ಟು ವರಮಾನ ಶೇಕಡ 9ರಿಂದ 10ರಷ್ಟು ಭಾಗವನ್ನು ಮಾತ್ರ ವ್ಯಯಿಸುತ್ತಿವೆ. ಇತರೆ ದೇಶಗಳ ಮೊಬೈಲ್ ಮಾರುಕಟ್ಟೆಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಮಟ್ಟದಲ್ಲಿದೆ. ದೇಶದಲ್ಲಿ ಮೂರನೆಯ ತಲೆಮಾರಿನ ತರಂಗಾಂತರ ಸೇವೆ (3ಜಿ) ಜಾರಿಗೆ ಬಂದಿದ್ದು,ಹಲವು ಸುಧಾರಿತ ಸೇವೆಗಳ ಜಾರಿಗೆ ಅನುಮತಿ ನೀಡಲಾಗಿದೆ.ಹೀಗಾಗಿ ಮೌಲ್ಯವರ್ಧಿತ ಸೇವೆಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಯಾಗಿದೆ., ಕಂಪೆನಿಗಳು ಹೆಚ್ಚಿನ ಮೊತ್ತವನ್ನು ಇದಕ್ಕಾಗಿ ಮೀಸಲಿಡಬೇಕು ಎಂದು ‘ಅಸೋಚಾಂ’ ವರದಿ ಹೇಳಿದೆ.  ‘ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದ್ದು, 2015ರ ವೇಳೆಗೆ ಇದು ಶೇಕಡ 100ರಷ್ಟು ಗುರಿಯನ್ನು ತಲುಪಲಿದೆ.  ‘3ಜಿ’ ಸೌಲಭ್ಯ ಜಾರಿಯಿಂದ ‘ಮಾಲ್ಯವರ್ಧಿತ ಸೇವೆಗಳ’ ಆದಾಯ ್ಙ 48,000 ಕೋಟಿಗಳನ್ನು ತಲುಪಬಹುದು. ‘ಎಂವಿಎಎಸ್’ ಸೇವೆಯಡಿ  ‘ಮಾಹಿತಿ ಮನೋರಂಜನೆ,  ಸಂಪರ್ಕ, ವಾಣಿಜ್ಯ, ಆರೋಗ್ಯ ಮತ್ತು ಕೃಷಿಯ ಕುರಿತು  ಗ್ರಾಹಕರಿಗೆ ಮಾಹಿತಿ ಒದಗಿಸಬಹುದು. ಮೊಬೈಲ್ ಮಾತ್ರವೇ ಈ ಸೇವೆಗಳಿಗೆ ಅತ್ಯುತ್ತಮ ಸಂವಹನ ಮಾಧ್ಯಮವಾಗಬಲ್ಲುದು  ಎಂದು ‘ಟ್ರಾಯ್’ ಅಭಿಪ್ರಾಯಪಟ್ಟಿದೆ.              

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry