ಶನಿವಾರ, ಮೇ 15, 2021
24 °C

ಮೊಬೈಲ್ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂರವಾಣಿ ದೂರು: ಮೊದಲ ಸ್ಥಾನದಲ್ಲಿ ದೆಹಲಿ
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಎಚ್) ಫೆಬ್ರುವರಿ ತಿಂಗಳ ದೂರವಾಣಿ ದೂರುಗಳ ಪಟ್ಟಿ ಬಿಡುಗಡೆ ಮಾಡಿದೆ. ಹೆಚ್ಚಿನ ದೂರುಗಳು ಸೇವಾ ಪೂರೈಕೆ ಲೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿವೆ. ಸುಮಾರು 10,584 ದೂರುಗಳು ಈ ಅವಧಿಯಲ್ಲಿ ದಾಖಲಾಗಿವೆ. ಇದರಲ್ಲಿ 606 ದೂರುಗಳು `ಎನ್‌ಸಿಎಚ್~ ವೆಬ್ ತಾಣದ ಮೂಲಕ ದಾಖಲಾಗಿವೆ.ದೆಹಲಿಯಿಂದ ಸುಮಾರು 2898 ದೂರಿನ ಕರೆಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ರಾಜಸ್ತಾನ, ಬಿಹಾರ, ಗುಜರಾತ್ ನಂತರದ ಸ್ಥಾನಗಳಲ್ಲಿವೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಒಟ್ಟು ದೂರುಗಳಲ್ಲಿ 603 ದೂರುಗಳನ್ನು ಬಗೆಹರಿಸಲಾಗಿದೆ. ಗ್ರಾಹಕರು ಗ್ರಾಹಕ ಸಹಾಯವಾಣಿ ಸಂಖ್ಯೆ 1800-11-400 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ www.nationalconsumerhelpine.in ತಾಣದ ಮೂಲಕ ದೂರು ದಾಖಲಿಸಬಹುದು.

 

ಅಗ್ಗದ ಹ್ಯಾಂಡ್‌ಸೆಟ್: ಚಂದಾದಾರರ ಸಂಖ್ಯೆ ಹೆಚ್ಚಳ
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ದೇಶದ ಮೊಬೈಲ್ ಚಂದಾದಾರರ ಸಂಖ್ಯೆ ಶೇ 9ರಷ್ಟು ಹೆಚ್ಚಲಿದ್ದು, 69 ಕೋಟಿಗೆ ಏರಿಕೆಯಾಗಲಿದೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆ ಗಾರ್ಟ್‌ನರ್ ಅಂದಾಜಿಸಿದೆ. 2011ರ ಅಂತ್ಯಕ್ಕೆ ದೇಶದಲ್ಲಿ ಒಟ್ಟು 64 ಕೋಟಿ ಮೊಬೈಲ್ ದೂರವಾಣಿ ಚಂದಾದಾರರಿದ್ದರು.

 

ಈ ಅವಧಿಯಲ್ಲಿ ಪ್ರತಿ ಗ್ರಾಹಕನಿಂದ ಬರುವ ಸರಾಸರಿ ವರಮಾನ (ಎಆರ್‌ಪಿಯು)ಹಿಂದಿನ ಎರಡು ವರ್ಷಗಳಿಗಿಂತಲೂ ಉತ್ತಮವಾಗಿತ್ತು ಎಂದು ಸಂಶೋಧನೆಯ ಅಂಕಿ ಅಂಶಗಳು ತಿಳಿಸಿವೆ. 2016ರ ವೇಳೆಗೆ ದೇಶದ ಮೊಬೈಲ್ ಸೇವಾ ವಲಯದಿಂದ ಒಟ್ಟು 15 ಲಕ್ಷ ಕೋಟಿಗಳಷ್ಟು ವರಮಾನ ನಿರೀಕ್ಷಿಸಲಾಗಿದೆ.ಅಗ್ಗದ ದರದ ಹ್ಯಾಂಡ್‌ಸೆಟ್‌ಗಳಿಂದ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಿಗೆ ಮೊಬೈಲ್ ಸೇವೆಗಳು ತೀವ್ರವಾಗಿ ವಿಸ್ತರಿಸಿಕೊಳ್ಳುತ್ತಿವೆ ಎನ್ನುತ್ತಾರೆ ಗಾರ್ಟ್‌ನರ್ ಸಂಸ್ಥೆಯ ಪ್ರಧಾನ ವಿಶ್ಲೇಷಕಿ ಶಾಲಿನಿ ವರ್ಮಾ. ಆದರೆ, ಚೀನಾಕ್ಕೆ ಹೋಲಿಸಿದರೆ ದೇಶದ ಮೊಬೈಲ್ ಚಂದಾದಾರರ ಸಂಖ್ಯೆ ಕಡಿಮೆ ಇದೆ. ದೇಶದಲ್ಲಿ ಪ್ರತಿ ಗ್ರಾಹಕನಿಂದ ಬರುವ ಸರಾಸರಿ ವರಮಾನ ದೇಶದಲ್ಲಿ ರೂ. 2 ಸಾವಿರದಷ್ಟಿದ್ದರೆ, ಚೀನಾದಲ್ಲಿ  ರೂ. 6000ದಷ್ಟಿದೆ. ಪ್ರಪಂಚದಲ್ಲಿಯೇ ಅತಿ ಕಡಿಮೆ `ಎಆರ್‌ಪಿಯು~ ಇರುವುದು ಭಾರತದಲ್ಲಿ.           

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.