ಮಂಗಳವಾರ, ಅಕ್ಟೋಬರ್ 15, 2019
29 °C

ಮೊಬೈಲ್ ಮಾತು

Published:
Updated:

`ಡರ್ಟಿ ಪಿಕ್ಚರ್: 2011ರ ಜನಪ್ರಿಯ ವಿಡಿಯೊ

2011ರಲ್ಲಿ ಮೊಬೈಲ್ ಮೂಲಕ ಅತಿ ಹೆಚ್ಚು ಜನರು ವೀಕ್ಷಿಸಿದ ವಿಡಿಯೊ ತುಣುಕು `ಡರ್ಟಿ ಪಿಕ್ಚರ್~. `ರಾ-ಒನ್~ ಎರಡನೆಯ ಸ್ಥಾನದಲ್ಲಿದೆ. ತಮಿಳು ಮತ್ತು ಇಂಗ್ಲೀಷ್ ಸಮ್ಮಿಳಿತ `ಕೊಲವರಿ-ಡಿ~ ಹಾಡು ಕೂಡ ಮೊಬೈಲ್ ಬಳಕೆದಾರರ ನಡುವೆ ವಿಪರೀತ ಜನಪ್ರಿಯವಾಗಿದೆ.`ಕೊಲವರಿ-ಡಿ~ ಮೂಲ ಹಾಡುಗಾರ `ಧನುಷ್~ ಧ್ವನಿಗಿಂತ ಸೋನು ನಿಗಮ್ ಅವರ ನಾಲ್ಕು ವರ್ಷದ ಮಗ `ನಿವಾನ್~ ಹಾಡಿರುವ ಎರಡನೆಯ ಆವೃತ್ತಿ ಹೆಚ್ಚಿನವರಿಗೆ ಇಷ್ಟವಾಗಿದೆ ಎನ್ನುತ್ತದೆ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವ `ವ್ಯೆ-ಕ್ಲಿಪ್~ ಎನ್ನುವ ಮೊಬೈಲ್ ವಿಡಿಯೊ ಕಂಪೆನಿ.ವಿದ್ಯಾಬಾಲನ್ ಅಭಿನಯದ `ಡರ್ಟಿ ಪಿಕ್ಚರ್~ನ ವಿಡಿಯೊ ಅನ್ನು 13 ಲಕ್ಷ ಮೊಬೈಲ್ ಬಳಕೆದಾರರು 24 ಸಾವಿರ ಸಲ ವೀಕ್ಷಿಸಿದ್ದಾರೆ. ವರ್ಷಾಂತ್ಯದಲ್ಲಿ ಈ ಚಿತ್ರ ಬಿಡುಗಡೆಯಾದರೂ 2011ರ  ಅತ್ಯಂತ ಜನಪ್ರಿಯ ಮೊಬೈಲ್ ವಿಡಿಯೊ ಆಗಿ  ಚಿತ್ರ ಆಯ್ಕೆಯಾಗಿದೆ. ಶಾರೂಕ್ ಖಾನ್ ಅಭಿನಯದ `ರಾ-ಒನ್~ ಚಿತ್ರದ ವಿಡಿಯೊ ತುಣುಕನ್ನು ಮೊಬೈಲ್‌ನಲ್ಲಿ 8 ಲಕ್ಷ ಬಾರಿ ವೀಕ್ಷಿಸಲಾಗಿದೆ. ನಿವಾನ್ ನಿಗಮ್ ಹಾಡಿರುವ `ಕೊಲವರಿ-ಡಿ~ ಹಾಡನ್ನು 2.86 ಲಕ್ಷ ಬಾರಿ ವೀಕ್ಷಿಸಲಾಗಿದೆ. ಆದರೆ, ಧನುಷ್ ಹಾಡಿರುವ ಮೂಲ ಹಾಡನ್ನು ಮೊಬೈಲ್‌ನಲ್ಲಿ 56 ಸಾವಿರ ಸಲ ವೀಕ್ಷಿಸಲಾಗಿದೆ.ರೂಪದರ್ಶಿ ಪೂನಂ ಪಾಂಡೆ ಮತ್ತು ಪಾಕಿಸ್ತಾನಿ ನಟಿ ವೀಣಾ ಮಲಿಕ್‌ಳ ಮೋಹಕ ಚಿತ್ರಗಳನ್ನು ಮೊಬೈಲ್  ಚಂದಾದಾರರು ಮುಗಿಬಿದ್ದು ನೋಡಿದ್ದಾರೆ.  ಪೂನಂ ಪಾಂಡೆ ಚಿತ್ರವನ್ನು 1 ಲಕ್ಷ ಬಾರಿ ವೀಕ್ಷಿಸಲಾಗಿದೆ.  ಪಾಕ್ಷಿಕವೊಂದರ ಮುಖಪುಟಕ್ಕೆ ನೀಡಿದ ಬೆತ್ತಲೆ ಚಿತ್ರದ ಮೂಲಕ ಸುದ್ದಿಯಲ್ಲಿದ್ದ ವೀಣಾ  ಮಲಿಕ್ ಚಿತ್ರವನ್ನು 18,697 ಬಾರಿ ವೀಕ್ಷಿಸಲಾಗಿದೆ. `ಬಿಗ್‌ಬಾಸ್-5~ಕ್ಕೆ ಪ್ರವೇಶ ಪಡೆದ (ಅಶ್ಲೀಲ ಚಿತ್ರ) ನಟಿ  ಸನ್ನಿ ಲಿಯೋನ್ ಚಿತ್ರವನ್ನು ಮೊಬೈಲ್ ಮೂಲಕ 2,500 ಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ ಎಂದು `ವ್ಯೆ-ಕ್ಲಿಪ್~ ಹೇಳಿದೆ. ಮೀನುಗಾರಿಕೆ:ಉಪಗ್ರಹ ಆಧಾರಿತ ನಕಾಶೆ ನೆರವು

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ 12ಕ್ಕೂ ಹೆಚ್ಚು ಗ್ರಾಮಗಳ ಮೀನುಗಾರರು  ಸಮುದ್ರಕ್ಕಿಳಿದರೆ ಬಲೆ ತುಂಬ ಮೀನು ಹಿಡಿಯುತ್ತಾರೆ. ಇಲ್ಲಿನ ಕರಾವಳಿ ತೀರದ ಮೀನುಗಾರರ ತಂಡ ಎಲ್ಲಿ, ಯಾವಾಗ ಬಲೆ ಬೀಸಿದರೆ ಎಷ್ಟು ಪ್ರಮಾಣದಲ್ಲಿ ಮೀನು ಸಿಗಬಹುದು ಎನ್ನುವುದನ್ನು ಕರಾರುವಾಕ್ಕಾಗಿ ಲೆಕ್ಕ ಹಾಕುತ್ತಾರೆ.ಮೀನುಗಾರಿಕಾ ವಲಯಗಳ ಕುರಿತು ಮಾಹಿತಿ ನೀಡುವ ಉಪಗ್ರಹ ನಕಾಶೆ ಮತ್ತು ದತ್ತಾಂಶಗಳೇ  ಈ ಯಶಸ್ವಿ ಮೀನುಗಾರಿಕೆ ಹಿಂದಿನ ಗುಟ್ಟು. ಈ ನಕಾಶೆ ಮತ್ತು ದತ್ತಾಂಶಗಳನ್ನು ಮೀನುಗಾರರು ವಿಶಿಷ್ಟ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಮೂಲಕ ಪಡೆದುಕೊಳ್ಳುತ್ತಾರೆ.  ಈ ಪ್ರಾಯೋಗಿಕ ಯೋಜನೆಯನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (ಐಎನ್‌ಸಿಒಎಸ್‌ಐಎಸ್) ಮತ್ತು  ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಜಂಟಿಯಾಗಿ ಕಳೆದ ವರ್ಷ ಜಾರಿಗೊಳಿಸಿದೆ. ಪ್ರಾರಂಭದಲ್ಲಿ ಇದು 15 ಗ್ರಾಮಗಳಲ್ಲಿ ಜಾರಿಗೆ ಬಂದಿದೆ. ಇದರಿಂದ ಮೀನುಗಾರರಿಗೆ ವಾರ್ಷಿಕ 5 ಲಕ್ಷ ಲೀಟರ್‌ಗಳಷ್ಟು ಡೀಸೆಲ್ ಉಳಿತಾಯವಾಗುತ್ತದೆ. ಮೀನುಗಾರಿಕೆಯೂ ಶೇ 50ರಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ಕೊಚ್ಚಿಯ ಸಾಗರ ಮೀನುಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ವೀರೇಂದ್ರ ಸಿಂಗ್.

Post Comments (+)