ಶುಕ್ರವಾರ, ಮೇ 20, 2022
21 °C

ಮೊಬೈಲ್ ವಿಕಿರಣ: ಐಸಿಎಂಆರ್ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಬೈಲ್ ಫೋನ್ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಮಗ್ರ ಅಧ್ಯಯನ ನಡೆಸಲು ಹೊರಟಿದೆ.ಮುಖ್ಯವಾಗಿ ನರಮಂಡಲ ವ್ಯವಸ್ಥೆ, ಹೃದಯ ಸಂಬಂಧಿಸಿದ ಸಮಸ್ಯೆಗಳು, `ಇಎನ್‌ಟಿ~ (ಕಿವಿ, ಮೂಗು ಮತ್ತು ಗಂಟಲು) ಮತ್ತು ಕ್ಯಾನ್ಸರ್ ಸಂಬಂಧಿ ಸಮಸ್ಯೆಗಳು ಮೊಬೈಲ್ ಬಳಕೆಯಿಂದ ಬರುತ್ತದೆಯೇ ಎನ್ನುವುದನ್ನು ನಿಖರವಾಗಿ ಪತ್ತೆ ಹಚ್ಚಲು ಈ ಸಂಶೋಧನೆ ನಡೆಯುತ್ತಿದೆ.ಮೊಬೈಲ್ ತರಂಗಾಂತರಗಳ ಪರಿಣಾಮ, `ರೇಡಿಯೊ ಕಂಪನಾಂಕಗಳ ವಿಕಿರಣ~(ಆರ್‌ಎಫ್‌ಆರ್) ಇತ್ಯಾದಿ ವಿಷಯಗಳ ಕುರಿತು ಅಧ್ಯಯನ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ವಿವಿಧ ರೀತಿಯ ಮೊಬೈಲ್‌ಫೋನ್ ಗೋಪುರಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಗುಲಾಬ್ ನಬಿ ಆಜಾದ್  ರಾಜ್ಯಸಭೆಗೆ ತಿಳಿಸಿದ್ದಾರೆ.`ಆರ್‌ಎಫ್‌ಆರ್~ಗೆ ಸಂಬಂಧಿಸಿದಂತೆ `ಐಸಿಎಂಆರ್~ನ ಹಿರಿಯ ವಿಜ್ಞಾನಿಗಳು  ಸಚಿವರ ತಂಡಕ್ಕೆ ಸಲಹೆ ನೀಡಲಿದ್ದು, ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಮುಖ್ಯವಾಗಿ ರೇಡಿಯೊ ವಿಕಿರಣ ಆರೋಗ್ಯದ ಮೇಲೆ ಬೀರುವ ಪರಿಣಾಮ ಮತ್ತು ವಿಕಿರಣ ಮಿತಿ ಕುರಿತು ವಿಜ್ಞಾನಿಗಳು ಸಲಹೆ ನೀಡಲಿದ್ದಾರೆ. ಇದನ್ನು ಆಧರಿಸಿ ಸರ್ಕಾರ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಸಂಸ್ಥೆಗಳಿಗೆ ಸೂಚನೆ ನೀಡಲಿದೆ.ವಿಜ್ಞಾನಿಗಳ ಸಲಹೆ ಮತ್ತು ಈಗ ಬಳಕೆಯಲ್ಲಿರುವ ಅಂತರರಾಷ್ಟ್ರೀಯ ಮಾನದಂಡ ಆಧರಿಸಿ ವಿಕಿರಣ ಹೊರಗೆಡುಹುವುದರ ಮಿತಿ ನಿರ್ಧರಿಸಲಾಗುತ್ತದೆ. ಹ್ಯಾಂಡ್‌ಸೆಟ್‌ಗಳಲ್ಲಿ ಸೂಕ್ತ ಪರಿಷ್ಕರಣೆ ತರುವಂತೆಯೂ ಕಂಪೆನಿಗಳಿಗೆ  ಸೂಚಿಸಲಾಗಿದೆ ಎಂದಿದ್ದಾರೆ ಆಜಾದ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.