ಮೊಬೈಲ್ ಸ್ಥಿರ ಸಂಖ್ಯೆ ಸೌಲಭ್ಯ ಜನಪ್ರಿಯತೆ

ಬುಧವಾರ, ಜೂಲೈ 17, 2019
28 °C

ಮೊಬೈಲ್ ಸ್ಥಿರ ಸಂಖ್ಯೆ ಸೌಲಭ್ಯ ಜನಪ್ರಿಯತೆ

Published:
Updated:

ನವದೆಹಲಿ (ಐಎಎನ್‌ಎಸ್): ತಮ್ಮ ಮೊಬೈಲ್ ಸಂಖ್ಯೆ ಉಳಿಸಿಕೊಂಡು ಮೊಬೈಲ್ ಸೇವಾ ಸಂಸ್ಥೆ ಬದಲಾಯಿಸಿಕೊಳ್ಳಲು ಅವಕಾಶ ಮಾಡಿಕೊಡುವ (ಎಂಎನ್‌ಪಿ) ಸೌಲಭ್ಯವನ್ನು 85 ಲಕ್ಷಕ್ಕೂ ಹೆಚ್ಚು ಗ್ರಾಹಕರು ಬಳಸಿಕೊಂಡಿದ್ದಾರೆ.ಏಪ್ರಿಲ್ ತಿಂಗಳ ಅಂತ್ಯದವರೆಗೆ ಒಟ್ಟು  85.41 ಲಕ್ಷದಷ್ಟು ಗ್ರಾಹಕರು `ಎಂಎನ್‌ಪಿ~ಗೆ ಕೋರಿಕೆ ಸಲ್ಲಿಸಿದ್ದಾರೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ. ಗ್ರಾಹಕರು ಈ ಸೌಲಭ್ಯ ಬಳಸಿಕೊಳ್ಳಲು ತಮ್ಮ ಮೊಬೈಲ್‌ನಿಂದ 1900 ಸಂಖ್ಯೆಗೆ ಎಸ್‌ಎಂಎಸ್ ಕಳಿಸಬೇಕು. ಗ್ರಾಹಕರು ಗರಿಷ್ಠ 19 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry