ಮೊಮ್ಮಗನಿಗೆ ಗಡ್ಡ ತೆಗೆ ಎಂದ ಎಲಿಜಬೆತ್‌

7

ಮೊಮ್ಮಗನಿಗೆ ಗಡ್ಡ ತೆಗೆ ಎಂದ ಎಲಿಜಬೆತ್‌

Published:
Updated:

ಲಂಡನ್‌(ಪಿಟಿಐ): ಬ್ರಿಟನ್‌ ಯುವರಾಜ  ಹ್ಯಾರಿಯ ಹೊಸ ಗಡ್ಡದ ಶೈಲಿಯನ್ನು ಎಲ್ಲರೂ ಪ್ರಶಂಸಿ­ಸಿದರೆ, ಅವರ ಅಜ್ಜಿ ಬ್ರಿಟನ್‌ ರಾಣಿ ಎಲಿಜ­ಬೆತ್‌­ ಗಡ್ಡವನ್ನು ತೆಗೆಯುವಂತೆ ರಾಜಾಜ್ಞೆ ನೀಡಿದ್ದಾಳೆ.ಮೊಮ್ಮಗ ಹ್ಯಾರಿಯ ಹೊಸ ಗಡ್ಡದ ಶೈಲಿಯಿಂದ ರಾಣಿ ಎಲಿಜಬೆತ್‌ಗೆ ಇರಿಸು­ಮುರಿಸು ಉಂಟಾಗಿದ್ದು, ಹೊಸ ವರ್ಷ­ದ ಆರಂಭದಲ್ಲಿಯೇ ಆದಷ್ಟು ಬೇಗ ಗಡ್ಡ­­ ಬೋಳಿಸಿಕೊಳ್ಳುವಂತೆ ಆದೇಶಿಸಿದ್ದಾರೆ.ರಾಜಾಜ್ಞೆ ಪಾಲಿಸಲು ಹ್ಯಾರಿ ಒಪ್ಪಿ­ಕೊಂಡಿದ್ದು, ತನ್ನ ಗೆಳತಿ ಕ್ರೆಸಿಡಾ ಬೋನಸ್‌ ಗಡ್ಡವನ್ನು ನೋಡಿದ ಬಳಿಕ ಅದನ್ನು ತೆಗೆ­ಯು­ವುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆದರೆ ಹ್ಯಾರಿಯ ಹೊಸ ಗಡ್ಡದ ಶೈಲಿಗೆ ಅಣ್ಣ ವಿಲಿ­ಯಮ್‌ ಹಾಗೂ ಅತ್ತಿಗೆ ಕೇಟ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry