ಮೊಯಿಲಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ಚಿಕ್ಕಬಳ್ಳಾಪುರ (ಐಎಎನ್ಎಸ್): ಕೇಂದ್ರ ಸಚಿವ ವೀರಪ್ಪ ಮೊಯಿಲಿ ವಿರುದ್ಧ ಭಾನುವಾರ ಬಿರುಸಿನ ಪ್ರಚಾರ ನಡೆಸಿದ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ್ ಕೇಜ್ರಿವಾಲ್, ಲೋಕಸಭೆ ಚುನಾವಣೆಯಲ್ಲಿ ಅವರನ್ನು (ಮೊಯಿಲಿ) ಸೋಲಿಸುವಂತೆ ಇಲ್ಲಿನ ಮತದಾರರಿಗೆ ಕರೆ ನೀಡಿದ್ದಾರೆ.
ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಕೇಜ್ರಿವಾಲ್ ಅವರು ನಿವೃತ್ತ ಪೋಲಿಸ್ ಅಧಿಕಾರಿಯಾಗಿರುವ ಎಎಪಿ ಅಭ್ಯರ್ಥಿ ಕೆ. ಅರ್ಕೇಶ್ ಪರ ಭಾನುವಾರ ಮಧ್ಯಾಹ್ನದ ಸುಡುಬಿಸಿಲಿನಲ್ಲೇ ಮತಯಾಚಿಸಿದರು.
‘ಅನಿಲ ದರ ಏರಿಕೆಯಲ್ಲಿ ಮೊಯಿಲಿ ಅವರು ಕೈಜೋಡಿಸಿದ್ದು(ಕಾರ್ಪೋರೆಟ್ ಕಂಪೆನಿಯೊಂದಿಗೆ), ಅವರಂತಹ ಭ್ರಷ್ಟ ಸಚಿವರು ಮತ್ತೆ ಆಯ್ಕೆಯಾಗಬಾರದು’ ಎಂದು ಕೇಜ್ರಿವಾಲ್ ಟೀಕಿಸಿದರು.
‘ಮೊಯಿಲಿ ಅವರಂತಹ ಮುಖಂಡರಿಗೆ ರಾಷ್ಟ್ರ ಸಂಪತ್ತನ್ನು ದೋಚಲು ಅವಕಾಶ ನೀಡುವುದು ದೇಶಕ್ಕೆ ಅಪಾಯಕಾರಿ’ ಎಂದೂ ಕೇಜ್ರಿವಾಲ್ ನುಡಿದರು.
2009ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮೊಯಿಲಿ ಅವರಿಗೆ ಕಾಂಗ್ರೆಸ್ ಈ ಬಾರಿಯೂ ಟಿಕೆಟ್ ನೀಡಿದೆ.
ಭ್ರಷ್ಟಾಚಾರ ವಿರೋಧಿ ಹೋರಾಟದ ಭಾಗವಾಗಿ ಎಎಪಿ, ಬಿಜೆಪಿಯ ಅನಂತ್ ಕುಮಾರ್ ಹಾಗೂ ಬಿ.ಎಸ್. ಯಡಿಯೂರಪ್ಪ ಅವರಂತಹ ರಾಜಕಾರಣಿಗಳ ವಿರುದ್ಧ ಬೆಂಗಳೂರು ದಕ್ಷಿಣ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.