ಗುರುವಾರ , ಆಗಸ್ಟ್ 5, 2021
22 °C

ಮೊರಾನಿ ಜಾಮೀನು ಅರ್ಜಿ: ಹೈಕೋರ್ಟ್ ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಬಿಐನಿಂದ ದೋಷಾರೋಪಕ್ಕೆ ಒಳಗಾಗಿರುವ ಸಿನಿಯುಗ್ ಫಿಲಮ್ಸ್ ನಿರ್ದೇಶಕ ಕರೀಂ ಮೊರಾನಿ ಅವರ ಜಾಮೀನು ಅರ್ಜಿ ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ ಅಲ್ಲದೆ ಮೊದಲು ವಿಚಾರಣಾ ನ್ಯಾಯಾಲಯವನ್ನು (ಸಿಬಿಐ) ಸಂಪರ್ಕಿಸಲು ಸೂಚಿಸಿದೆ.ಅರ್ಜಿದಾರರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗುವ ಮೊದಲು ಸಿಬಿಐ ಸಂಪರ್ಕಿಸಬೇಕು ಎಂಬುದು ಶಿಷ್ಟಾಚಾರ. ದೋಷಾರೋಪ ಪಟ್ಟಿ ವಿಶೇಷ ನ್ಯಾಯಾಲಯದಲ್ಲಿ ಇರುವುದರಿಂದ ತಾವು ಈ ಬಗ್ಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಅಜಿತ್ ಭಾರಿಯೊಹೊಕ್ ತಿಳಿಸಿದರು.

ಈ ಆದೇಶದ ಹಿನ್ನೆಲೆಯಲ್ಲಿ ಮೊರಾನಿ ಅವರ ಪರ ವಕೀಲ ಮುಕುಲ್ ರೊಹತಗಿ ಅವರು ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದರು.ವಿಶೇಷ ಸಿಬಿಐ ಕೋರ್ಟ್ ಮುಂದೆ ಒಮ್ಮೆ ಹಾಜರಾದರೆ ಇತರ ಆರೋಪಿಗಳಂತೆ ತಮ್ಮನ್ನೂ ಬಂಧಿಸಬಹುದು ಎಂದು ಮೊರಾನಿ ಅವರು ಸೋಮವಾರ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಡಿಎಂಕೆ ಸಂಸದೆ ಕನಿಮೊಳಿ,  ಸ್ವಾನ್ ಟೆಲಿಕಾಂನ ಶಾಹಿದ್ ಬಲ್ವಾ ಮತ್ತಿರರೊಂದಿಗೆ ಮೊರಾನಿ ವಿರುದ್ಧವೂ ಸಿಬಿಐ ಏಪ್ರಿಲ್ 25ರಂದು ದೋಷಾರೋಪ ಹೊರಿಸಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.