ಸೋಮವಾರ, ಜೂನ್ 14, 2021
21 °C

ಮೊರಾರ್ಜಿ ದೇಸಾಯಿ ಮೌಲ್ಯಾಧಾರಿತ ರಾಜಕಾರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಪ್ರಾಮಾಣಿಕ, ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ಅವರ ತತ್ವ-ಆದರ್ಶಗಳು ಅನುಕರಣೀಯ ಎಂದು ಪಟ್ಟಣದ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಹೇಳಿದರು.ಪಟ್ಟಣದ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಮೊರಾರ್ಜಿ ದೇಸಾಯಿ ಅವರ 116ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಮಹಾತ್ಮಾ ಗಾಂಧಿ ಅವರ ವಿಚಾರಧಾರೆ ಮೈಗೂಡಿಸಿಕೊಂಡಿದ್ದ ದೇಸಾಯಿ ಅವರು, ಸರಳತೆ, ಶಿಸ್ತು, ದಕ್ಷತೆಗೆ ಹೆಸರಾಗಿದ್ದರು. ಜನತಾ ಪಕ್ಷ ಸ್ಥಾಪಿಸಿ 1977-79ರವರೆಗೆ ಭಾರತದ ಪ್ರಧಾನಿಯಾಗಿದ್ದರು. ತಮ್ಮ ಪಾರದರ್ಶಕ ಆಡಳಿತ ಹಾಗೂ ಪ್ರಗತಿಪರ ಬಜೆಟ್‌ನಿಂದಾಗಿ ದೇಶದ ಉದ್ದಗಲದಲ್ಲೂ ಜನಪ್ರಿಯತೆ ಗಳಿಸಿದ್ದರು ಎಂದು ವಿವರಿಸಿದರು.ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯ ನಿಲಯ ಪಾಲಕ ವೇದಮೂರ್ತಿ, ವಿದ್ಯಾರ್ಥಿಗಳಾದ ತುಳಸಿ ಮತ್ತು ಮಂಜು ಅವರು ಮೊರಾರ್ಜಿ ದೇಸಾಯಿ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.ಶಿಕ್ಷಕರಾದ ದಿನೇಶ್, ಎ.ಎಲ್. ತ್ಯಾಗರಾಜ್, ಡಿ.ಸಿ. ರೂಪಾ, ಶೀಲಾಬಾಯಿ, ವಿಕ್ರಮ್, ವಿಜಯ್, ರಮೇಶ್, ಗಿರೀಶ್, ಬೋಧಕೇತರ ಸಿಬ್ಬಂದಿ ಇದ್ದರು.ಇಂದು ರಥೋತ್ಸವ

ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ದೊಡ್ಡರಥೋತ್ಸವ ಮಾರ್ಚ್ 2ರಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ನಡೆಯಲಿದೆ.ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದ ಮಂಜುನಾಥ, ನರಸಿಂಹಸ್ವಾಮಿ ಹಾಗೂ ಸೊರಟೂರು ಗ್ರಾಮದ ಹನುಮಂತ ದೇವರ ಉತ್ಸವ ಮೂರ್ತಿಗಳು ಪಾಲ್ಗೊಳ್ಳಲಿವೆ. ನಂತರ ಸೊರಟೂರು ಗ್ರಾಮದ ಹನುಮಂತ ದೇವರ ದಾಸಪ್ಪರಿಂದ ಮಣೇವು ನಡೆಯಲಿದೆ. ಸಂಜೆ 5ಕ್ಕೆ ಓಕುಳಿ ಕಾರ್ಯಕ್ರಮ ಇದೆ.ಜನಸ್ಪಂದನ ಸಭೆ ನಾಳೆ

ತಾಲ್ಲೂಕಿನ ಗೋವಿನಕೋವಿ ಗ್ರಾಮದಲ್ಲಿ ಮಾರ್ಚ್ 3ರಂದು ಬೆಳಿಗ್ಗೆ 11ಕ್ಕೆ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ತಿಳಿಸಿದ್ದಾರೆ.ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಧ್ಯಕ್ಷತೆ ವಹಿಸುವರು. ಎಲ್ಲರೂ ಹಾಜರಾಗಿ ಸಭೆ ಯಶಸ್ವಿಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.