ಮೊಲ ಬೇಟೆಗೆ ಯತ್ನ: ಮೂವರ ಬಂಧನ

7

ಮೊಲ ಬೇಟೆಗೆ ಯತ್ನ: ಮೂವರ ಬಂಧನ

Published:
Updated:

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ(ಬಿಆರ್‌ಟಿ) ಕೆ. ಗುಡಿ ವಲಯದಲ್ಲಿ ಉರುಳು ಹಾಕಿ ಮೊಲದ ಬೇಟೆಗೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜೋಯಿಸ್‌ಕೊಪ್ಪಲು ಗ್ರಾಮದ ಸುರೇಶ್, ಬೀರಲಿಂಗ ಹಾಗೂ ಪಾತಯ್ಯ ಬಂಧಿತರು. ಆರೋಪಿಗಳಿಂದ ಉರುಳು ವಶಪಡಿಸಿ ಕೊಳ್ಳಲಾಗಿದೆ. ಬಂಧಿತರು ಶುಂಠಿ ಜಮೀನಿನಲ್ಲಿ ಕೆಲಸ ಮಾಡಲು ಕೂಲಿ ಅರಸಿಕೊಂಡು ಯಳಂದೂರಿಗೆ ಬಂದಿದ್ದಾರೆ. ಯಜಮಾನ ಕಟ್ಟೆಯ ಐಯ್ಯನಪುರ ಬೀಟ್ ಬಳಿ ಉರುಳು ಅಳವಡಿಸಿ ಮೊಲ ಹಿಡಿಯಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.ಆರೋಪಿಗಳನ್ನು ಡಿ. 17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೆ. ಗುಡಿಯ ವಲಯ ಅರಣ್ಯಾಧಿಕಾರಿ ಎ.ಎ. ಖಾನ್ ನೇತೃತ್ವದಲ್ಲಿ ಸಿಬ್ಬಂದಿಯಾದ ಎಂ. ರವಿ, ರವಿಕುಮಾರ್, ರಮೇಶ್, ಮಹದೇವ್, ಮಹದೇವಸ್ವಾಮಿ ಹಾಗೂ ರಂಗಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry