ಮೊಳಕಾಲ್ಮುರು ಪಟ್ಟಣ ಪಂಚಾಯ್ತಿ: ಅಧ್ಯಕ್ಷರಾಗಿ ಬಲ್ಕಿಶ್ಬಾನು ಆಯ್ಕೆ
ಮೊಳಕಾಲ್ಮುರು: ಇಲ್ಲಿನ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಬಲ್ಕಿಶ್ಬಾನು ಮಂಗಳವಾರ ಅವಿರೋಧ ಆಯ್ಕೆಯಾದರು.
ಹಿಂದಿನ ಅಧ್ಯಕ್ಷೆ ಸಮೀರಾನಾಜ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಆಯ್ಕೆ ನಡೆಯಿತು.
ಹಿಂದುಳಿದ ವರ್ಗ `ಬಿ~ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಬಲ್ಕಿಶ್ಬಾನು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಸುಗಮವಾಯಿತು.
ನಾಲ್ಕು ಮಂದಿ ಬಿಜೆಪಿ ಸದಸ್ಯರು ಗೈರು ಆಗಿದ್ದರು. ಶಾಸಕ ಎನ್.ವೈ. ಗೋಪಾಲಕೃಷ್ಣ ಪಾಲ್ಗೊಂಡು, ಬಲ್ಕಿಶ್ಬಾನು ಪರ ಮತ ಚಲಾಯಿಸಿದರು.
ಪ್ರಭಾರ ತಹಶೀಲ್ದಾರ್ ಮಹಮದ್ ಖಾಸೀಂ ಚುನಾವಣಾ ಅಧಿಕಾರಿಯಾಗಿದ್ದರು. ನಂತರ ನಡೆದ ಮೆರವಣಿಗೆಯಲ್ಲಿ ಮಾರನಾಯಕ, ಶ್ರೀನಿವಾಸಲು, ಜಿ. ಪ್ರಕಾಶ್, ಸೂರ್ಯ ನಾರಾಯಣ್, ಎಸ್. ಖಾದರ್, ಬಡೋಬನಾಯಕ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.