ಮೊಳಕಾಲ್ಮುರು: ಶೇಕಡಾ 79.10 ಫಲಿತಾಂಶ

7

ಮೊಳಕಾಲ್ಮುರು: ಶೇಕಡಾ 79.10 ಫಲಿತಾಂಶ

Published:
Updated:

ಮೊಳಕಾಲ್ಮುರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇಕಡಾ 79.10 ಫಲಿತಾಂಶ ಲಭ್ಯವಾಗಿದೆ.

1,006 ವಿದ್ಯಾರ್ಥಿಗಳು, 807 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 1,813 ಮಂದಿ ಪರೀಕ್ಷೆ ಬರೆದಿದ್ದು, ಈ ಪೈಕಿ 792 ವಿದ್ಯಾರ್ಥಿಗಳು ಮತ್ತು 642 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 1,598 ಮಂದಿ ಉತ್ತೀರ್ಣರಾಗಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಶೇಕಡಾ ಒಂದರಷ್ಟು ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಉಮಾದೇವಿ ತಿಳಿಸಿದರು.ದೇವಸಮುದ್ರ ಸರ್ಕಾರಿ ಪ್ರೌಢಶಾಲೆಯು ಸರ್ಕಾರಿ ಪ್ರೌಢಶಾಲೆಗಳ ಪೈಕಿ ಶೇಕಡಾ 93.63 ಮತ್ತು ಖಾಸಗಿ ಶಾಲೆಗಳ ಪೈಕಿ ತುಲಕೂರ‌್ಲಹಳ್ಳಿಯ ಕಂಪಳ ರಂಗಸ್ವಾಮಿ ಪ್ರೌಢಶಾಲೆ ಶೇಕಡಾ 90 ಫಲಿತಾಂಶ ಪಡೆದು ಪ್ರಥಮಸ್ಥಾನದಲ್ಲಿದೆ. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಸುಮಂತ್‌ರೆಡ್ಡಿ 590 ಅಂಕ ಪಡೆದು ತಾಲ್ಲೂಕಿಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯಾಗಿದ್ದಾನೆ.ಉಳಿಂದತೆ ವಿವರ ಇಂತಿದೆ: ಸರ್ಕಾರಿ ಪದವಿಪೂರ್ವ ಕಾಲೇಜು, ಮೊಳಕಾಲ್ಮುರು ಶೇಕಡಾ 75.62, ಸರ್ಕಾರಿ ಪ್ರೌಢಶಾಲೆ ನಾಗಸಮುದ್ರ, 79.49, ಸ.ಪ್ರೌ.ಶಾಲೆ, ದೇವಸಮುದ್ರ, ಶೇ.93.62, ಸ.ಪ್ರೌ.ಶಾಲೆ ಬಿ.ಜಿ.ಕೆರೆ, ಶೇಕಡಾ 60.87, ಸ.ಪ್ರೌ.ಶಾಲೆ ಬಾಂಡ್ರಾವಿ, ಶೇಕಡಾ 76.19, ಸ.ಪ್ರೌ. ಶಾಲೆ ತಮ್ಮೇನಹಳ್ಳಿ ಶೇಕಡಾ 88.89, ಸ.ಬಾಲಕಿಯರ ಪ್ರೌಢಶಾಲೆ, ಮೊಳಕಾಲ್ಮುರು ಶೇಕಡಾ 78.18, ಸ.ಪ್ರೌ.ಶಾಲೆ ಸಿದ್ದಯ್ಯನಕೋಟೆ, ಶೇಕಡಾ 87.18, ಮೊರಾರ್ಜಿ ದೇಸಾಯಿ ವಸತಿಶಾಲೆ, ಮೊಳಕಾಲ್ಮುರು ಶೇಕಡಾ 89.47, ಆರ್‌ಎಂಎಸ್‌ಎ ಪ್ರೌಢಶಾಲೆ, ಜೆ.ಬಿ.ಹಳ್ಳಿ ಶೇಕಡಾ 66.67, ವಿಶಾಲಾಕ್ಷಿ ಪ್ರೌಢಶಾಲೆ, ಕೋನಸಾಗರ, ಶೇಕಡಾ 33.33,ಕಂಪಳರಂಗಸ್ವಾಮಿ ಪ್ರೌಢಶಾಲೆ, ತುಮಕೂರ‌್ಲಹಳ್ಳಿ, ಶೇ. 90, ನುಂಕೆಮಲೆ ಸಿದ್ದೇಶ್ವರ ಸ್ವಾಮಿ ಪ್ರೌಢಶಾಲೆ, ಹಾನಗಲ್, ಶೇಕಡಾ 73.20, ಎಸ್‌ಪಿಎಸ್‌ಆರ್‌ಜೆಸಿ ಪ್ರೌಢಶಾಲೆ, ರಾಂಪುರ, ಶೇಕಡಾ 89.23, ದುರ್ಗಾ ಪ್ರೌಢಶಾಲೆ, ಮೊಳಕಾಲ್ಮುರು, ಶೇಕಡಾ 64.04, ಗ್ರಾಮಾಂತರ ಪ್ರೌಢಶಾಲೆ ಕೊಂಡ್ಲಹಳ್ಳಿ, ಶೇಕಡಾ 80.12, ಬಸವೇಶ್ವರ ಪ್ರೌಢಶಾಲೆ ಬಿ.ಜಿ.ಕೆರೆ, ಶೇಕಡಾ 74, ಎಸ್‌ಎಲ್‌ಎನ್ ಪ್ರೌಢಶಾಲೆ ರಾಂಪುರ, ಶೇಕಡಾ 84.93, ಘಟ್ಟಪ್ಪನಾಯಕ ಪ್ರೌಢಶಾಲೆ ಚಿಕ್ಕೋಬನಹಳ್ಳಿ, ಶೇಕಡಾ 89.83, ಶ್ರೀನಿವಾಸ ನಾಯಕ ಪ್ರೌಢಶಾಲೆಮೊಳಕಾಲ್ಮುರು, ಶೇಕಡಾ 60, ಗುರುರಾಘವೇಂದ್ರ ಸ್ವಾಮಿ ಪ್ರೌಢಶಾಲೆ ಚಿಕ್ಕೇರಹಳ್ಳಿ, ಶೇಕಡಾ 79.07, ಅಶೋಕ ಗ್ರಾಮಾಂತರ ಪ್ರೌಢಶಾಲೆ ಅಶೋಕ ಸಿದ್ದಾಪುರ, ಶೇಕಡಾ 50, ಮುದುಕೇಶ್ವರ ಪ್ರೌಢಶಾಲೆ ರಾಂಪುರ, ಶೇಕಡಾ 92.59, ಸೆಂಟ್‌ಜಾನ್ ಪ್ರೌಢಶಾಲೆ ರಾಂಪುರ, ಶೇಕಡಾ 98 ಪಡೆದುಕೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.ಮಾರುತಿ ಪ್ರೌಢಶಾಲೆ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹನುಮಂತನಹಳ್ಳಿಯ ಮಾರುತಿ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಪಡೆದುಕೊಂಡಿದೆ.ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ಒಂದು ಡಿಸ್ಟಿಂಕ್ಷನ್, 29 ಪ್ರಥಮದರ್ಜೆ, 8 ದ್ವಿತೀಯದರ್ಜೆ ಹಾಗೂ ಮೂವರು ವಿದ್ಯಾರ್ಥಿಗಳು ತೃತೀಯದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯಶಿಕ್ಷಕ ಎಂ.ಟಿ. ಚಂದ್ರಶೇಖರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry