ಸೋಮವಾರ, ಮೇ 23, 2022
30 °C

ಮೊಳಗಿದ ಜಯಘೋಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈರೊ (ಐಎಎನ್‌ಎಸ್): ಮುಬಾರಕ್ ಅವರ ವಿರುದ್ಧದ ಪ್ರತಿಭಟನೆಗೆ ಪ್ರಮುಖ ವೇದಿಕೆಯಾಗಿದ್ದ ಇಲ್ಲಿನ ‘ತಹ್ರೀರ್ ಚೌಕ’ದಲ್ಲಿ ಶುಕ್ರವಾರ ರಾತ್ರಿ ಮೊಳಗಿದ್ದು ‘ಈಜಿಪ್ಟ್ ಮುಕ್ತವಾಗಿದೆ’ ‘ಈಜಿಪ್ಟ್ ಮುಕ್ತವಾಗಿದೆ’ ಎಂಬ ಒಂದೇ ಘೋಷಣೆ. ‘ಸರ್ವಾಧಿಕಾರಿ’ಯನ್ನು ಕೆಳಗಿಳಿಸೇ ತೀರುವ ಛಲದೊಂದಿಗೆ ಕಳೆದ ಹಲವು ದಿನಗಳಿಂದ ಇಲ್ಲಿ ಬೀಡುಬಿಟ್ಟಿದ್ದ ಸಾವಿರಾರು ಪ್ರತಿಭಟನಾಕಾರರ ಜಯಘೋಷದಿಂದ ಚೌಕವಿರುವ ಇಡೀ ಪ್ರದೇಶ ಮುಳುಗಿಹೋಯಿತು. ಬ್ಯಾನರ್‌ಗಳು, ಭಿತ್ತಿಚಿತ್ರಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಬೇಡಿಕೆ ಈಡೇರಿದ ಸಂತಸದಲ್ಲಿ ಹರ್ಷೋದ್ಗಾರದಿಂದ ಬೀಗಿದರು.ಜನವರಿ 25ರಿಂದ ಚೌಕದಲ್ಲಿ ಆರಂಭವಾಗಿದ್ದ ಪ್ರತಿಭಟನೆ, ಮತ್ತಷ್ಟು ಮಗದಷ್ಟು ಜನ ಬಂದು ಸೇರುವುದರೊಂದಿಗೆ ದಿನೇ ದಿನೇ ಕಾವು ಪಡೆದುಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.