ಮೋದಿಗೆ ವೀಸಾ: ನಿಲುವು ಬದಲಿಲ್ಲ– ಅಮೆರಿಕ

7

ಮೋದಿಗೆ ವೀಸಾ: ನಿಲುವು ಬದಲಿಲ್ಲ– ಅಮೆರಿಕ

Published:
Updated:

ವಾಷಿಂಗ್ಟನ್‌(ಪಿಟಿಐ): ಮುಂಬರುವ ಲೋಕಸಭಾ ಚುನಾ­ವಣೆಗೆ ಬಿಜೆಪಿ ಗುಜರಾತ್‌ ಮುಖ್ಯಮಂತ್ರಿ­ಯವರನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿ ಸಿದರೂ, ನಮ್ಮ ವೀಸಾ ನಿಯಮಾವಳಿ ಯಲ್ಲಿ ಯಾವುದೇ ಬದಲಾವಣೆ ಮಾಡ ಲಾಗುವುದಿಲ್ಲ ಎಂದು ಅಮೆರಿಕ ಹೇಳಿದೆ.‘ಮೋದಿ ಅವರು ಅಮೆರಿಕಕ್ಕೆ ಬರಲು ಇಚ್ಛಿಸಿದ್ದಲ್ಲಿ, ಮತ್ತೆ ಅವರು ಸಾಮಾನ್ಯ­ರಂತೆ ಅರ್ಜಿ ಸಲ್ಲಿಸಲಿ. ಅವರ ಅರ್ಜಿ ಯನ್ನು ದೇಶದ ಕಾನೂನಿನಂತೆ ಪರಿಶೀಲಿ ಸಲಾಗುವುದು. ಪರಿಶೀಲನೆ ನಂತರ ಫಲಿತಾಂಶ ಏನು ಬರಲಿದೆ ಎನ್ನುವು ದನ್ನು ನಾನು ಈಗಲೇ ಊಹಿಸಿ ಹೇಳಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ವಕ್ತಾರೆ ಮೇರಿ ಹಾರ್ಫ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry