ಸೋಮವಾರ, ಮೇ 10, 2021
28 °C

ಮೋದಿಗೆ ಸ್ಥಾನ: ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಗೋವಾ ಕಾರ್ಯಕಾರಿಣಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ನೀಡಿರುವುದು ಸ್ವಾಗತಾರ್ಹ. ರಾಷ್ಟ್ರೀಯ ನಾಯಕರು, ಕಾರ್ಯಕಾರಿಣಿಯಲ್ಲಿ ಸಮರ್ಥ ವ್ಯಕ್ತಿಯನ್ನೇ ಆಯ್ಕೆಮಾಡಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಕಕ್ಷ  ಶಿವಾನಂದ ಕಲ್ಲೂರ ಹರ್ಷವ್ಯಕ್ತಪಡಿಸಿದ್ದಾರೆ.ಅತೀ ಹೆಚ್ಚು ಕರ್ನಾಟಕದಿಂದ ಅಭ್ಯರ್ಥಿಗಳನ್ನು ಗೆಲ್ಲಿಸಲು ಈ ಭಾಗದ ಬಿಜೆಪಿ ಕಾರ್ಯಕರ್ತರಿಗೆ ಚೈತನ್ಯ ತಂದುಕೊಟ್ಟಂತಾಗಿದೆ. ಮೋದಿಯವರು ಗುಜರಾತ್ ರಾಜ್ಯ ಅಭಿವೃದ್ಧಿಯಾಗುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ. ಜನಪರ ಕಾರ್ಯಗಳನ್ನು ಮಾಡಿ ದೇಶದ ಮನೆಮಾತಾಗಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯುವುದು ಅದು ಬಿಜೆಪಿ ಪಕ್ಷದಿಂದ ಮಾತ್ರ. ದೇಶದ ಭದ್ರತೆ, ಸುರಕ್ಷತೆಗೆಯನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರವು ವಿಫಲವಾಗಿದೆ.ಭಾರತಮಾತೆಯ ಪುನರ್ ಉದ್ಧಾರಕ್ಕಾಗಿ ನರೇಂದ್ರ ಮೋದಿಯವರ ಅವಶ್ಯಕತೆ ಇಂದು ಅತಿ ಅವಶ್ಯವಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.