ಮೋದಿ ಅತ್ಯಂತ ಅರ್ಹ ಅವಿವಾಹಿತ

7

ಮೋದಿ ಅತ್ಯಂತ ಅರ್ಹ ಅವಿವಾಹಿತ

Published:
Updated:

ಉದಯಪುರ(ಐಎಎನ್‌ಎಸ್): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅತ್ಯಂತ ಅರ್ಹ ಅವಿವಾಹಿತ (ಮೋಸ್ಟ್ ಎಲಿಜಬಲ್ ಬ್ಯಾಚಲರ್)ಹೀಗೆಂದು ಹೇಳಿದ್ದು ಬೇರಾರೂ ಅಲ್ಲ  ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್.ಟಿವಿ ಶೋ `ದಿ ಬ್ಯಾಚಲರೊಟ್ಟೆ ಇಂಡಿಯಾ- ಮೇರಿ ಖಯಾಲೊಂಕಿ ಮಲ್ಲಿಕಾ' ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಲ್ಲಿಕಾ, `ದೇಶದ ಅತ್ಯಂತ ಅರ್ಹ ಅವಿವಾಹಿತ ಯಾರು' ಎಂಬ ಪ್ರಶ್ನೆಗೆ ಉತ್ತರಿಸಿದರು.`ನನ್ನ ಪ್ರಕಾರ ನರೇಂದ್ರ ಮೋದಿ. ಅವರು ಸುಂದರವಾಗಿದ್ದಾರೆ, ಅಲ್ಲದೇ ಪ್ರಗತಿಪರರು ಹಾಗೂ ನನ್ನ ಹಾಗೆಯೇ ಅವರನ್ನು ಪದೇಪದೇ ಜನ ತಪ್ಪಾಗಿ ತಿಳಿದುಕೊಳ್ಳುತ್ತಾರೆ' ಎಂದು ಮಲ್ಲಿಕಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry