ಮಂಗಳವಾರ, ಮೇ 18, 2021
30 °C

ಮೋದಿ ಅಲೆ ಗುಜರಾತ್‌ಗೆ ಸೀಮಿತ- ಕಾಂಗ್ರೆಸ್ ಲೇವಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ನೇತೃತ್ವ ವಹಿಸಿರುವುದಕ್ಕೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, `ಮೋದಿ ಅಲೆ ಕೇವಲ ಗುಜರಾತ್‌ಗೆ ಸೀಮಿತವಾಗಿದೆ' ಎಂದು ಲೇವಡಿ  ಮಾಡಿದೆ.`ಮೋದಿ ಪ್ರಚಾರ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎನ್ನುವುದನ್ನು ಕರ್ನಾಟಕದಲ್ಲಿ ನಾವು ನೋಡಿದ್ದೇವೆ. ಕೋಮುವಾದಿ ರಾಜಕಾರಣವನ್ನು ಬೆಂಬಲಿಸುವವರಿಗೆ ಮೋದಿ ಇಷ್ಟವಾಗುತ್ತಾರೆ. ಆದರೆ ಈ ರೀತಿಯ ರಾಜಕಾರಣ ನಮ್ಮ ವ್ಯವಸ್ಥೆಗೆ ವಿರುದ್ಧವಾದುದು. ಮೋದಿ ಅವರಂಥ ಕೋಮುವಾದಿ ರಾಜಕಾರಣಿಗಳನ್ನು ಜನಸಾಮಾನ್ಯರು ಹೊಗಳುವುದಿಲ್ಲ' ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹಮದ್ ವ್ಯಂಗ್ಯವಾಡಿದ್ದಾರೆ.`ಇಷ್ಟಕ್ಕೂ, ಚುನಾವಣಾ ಪ್ರಚಾರ ಸಮಿತಿಯ ನೇತೃತ್ವವನ್ನು ಯಾರಿಗೆ ವಹಿಸಬೇಕು ಎನ್ನುವುದು ಬಿಜೆಪಿಯ ಆಂತರಿಕ ವಿಚಾರ' ಎಂದೂ ಅವರು ಹೇಳಿದ್ದಾರೆ.ಮೋದಿ ಅವರನ್ನು ಅಭಿನಂದಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, `ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಬಿಜೆಪಿಗೆ ಬಿಟ್ಟ ವಿಚಾರ' ಎಂದಿದ್ದಾರೆ.ಅಕಾಲಿ ದಳ ಸ್ವಾಗತ: ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದನ್ನು ಶಿರೋಮಣಿ ಅಕಾಲಿ ದಳ ಸ್ವಾಗತಿಸಿದೆ.`ಭ್ರಷ್ಟಾಚಾರ ಹಾಗೂ ಅದಕ್ಷತೆಯಿಂದ ಕೂಡಿದ ಯುಪಿಎ ಎರಡನೇ ಅವಧಿಯ ಆಡಳಿತಕ್ಕೆ ಈ ಮೂಲಕ ತೆರೆ ಬೀಳಲಿದೆ' ಎಂದು ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.