ಮೋದಿ ಅಲೆ ಮಾಧ್ಯಮ ಸೃಷ್ಟಿ: ಧರ್ಮಸಿಂಗ್

7

ಮೋದಿ ಅಲೆ ಮಾಧ್ಯಮ ಸೃಷ್ಟಿ: ಧರ್ಮಸಿಂಗ್

Published:
Updated:

ಆಳಂದ: ದೇಶದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಇಲ್ಲ, ಇದು ಕೇವಲ ಮಾಧ್ಯಮದ ಸೃಷ್ಟಿ­ಯಾಗಿದೆ. ಇದರ ಹಿಂದೆ ಆರ್ಎಸ್ಎಸ್ ಕೈವಾಡವಿದೆ. ಮತ್ತೆ ಕಾಂಗ್ರೆಸ್ ಪಕ್ಷವೇ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಸಂಸದ ಎನ್.ಧರ್ಮಸಿಂಗ್ ಹೇಳಿದರು.ಪಟ್ಟಣದ ಶಹಾ ಮಂಗಲ ಕಾರ್ಯಲಯ­ದಲ್ಲಿ ಮಂಗಳವಾರ ಏರ್ಪಡಿಸಿದ್ದ ಆಳಂದ ಮತ್ತು ಮಾದನ ಹಿಪ್ಪರ್ಗಾ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದರು.ಮೋದಿ ಬಗ್ಗೆ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅತೃಪ್ತರಾದರೆ, ರಾಜ್ಯ­ದಲ್ಲಿ ಯಡಿಯೂರಪ್ಪ ಮರಳಿ ಬಿಜೆಪಿ ಸೇರ್ಪಡೆಯಿಂದ ಮುಖಂಡ ಅನಂತಕುಮಾರ್‌ ನಡುವೆ ಒಳಜಗಳ ಆರಂಭಗೊಂಡಿದೆ. ಈ ಪಕ್ಷ ಹೇಗೆ ಅಧಿಕಾರ ಹಿಡಿಯಲು ಸಾಧ್ಯ? ಎಂದರು.‘ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ನಾನೂ ಸಂಸದರಾಗಿ ನಿರಂತರ ಒತ್ತಡ ಹಾಕಿದ ಪರಿಣಾಮ ಸಂವಿಧಾನದ 371(ಜೆ) ವಿಧಿಗೆ ತಿದ್ದುಪಡಿ ತರಲು ಸಾಧ್ಯವಾಯಿತು’ ಎಂದು ಹೇಳಿದರು.ಇದು ನನ್ನ ಕೊನೆ ಚುನಾವಣೆ. ಹೈಕಮಾಂಡ್ ಹೇಳಿದರೆ ಲೋಕಸಭೆಗೆ ಸ್ಪರ್ಧಿಸುವೆ, ಇಲ್ಲವಾದರೇ ಇಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಅಪ್ರಾಮಾಣಿಕ­ನಾಗಿಲ್ಲ. ಅದಕ್ಕೆ ದೇವರು ನನಗೆ ಉನ್ನತ ಸ್ಥಾನಮಾನ ನೀಡಿದ್ದಾನೆ ಎಂದು ನುಡಿದರು.ವಿಧಾನ ಪರಿಷತ್‌ ಸದಸ್ಯ ಅಲ್ಲಮ ಪ್ರಭು ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಸೀರೆ–ಸೈಕಲ್ ಮಾತ್ರ ನೀಡಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊದಲ ದಿನವೇ ಒಂದು ರೂಪಾಯಿ ದರದಲ್ಲಿ ಅಕ್ಕಿ, ಮಕ್ಕಳಿಗೆ ಹಾಲು ಮತ್ತು ಎಸ್‌ಸಿ, ಎಸ್‌ಟಿ ಜನರ ಸಾಲ ಮನ್ನಾ ಮಾಡಿದೆ’ ಎಂದರು.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭಾಗಣಗೌಡ ಪಾಟೀಲ, ಮಾಜಿ ಶಾಸಕ ಶರಣಬಸಪ್ಪ ಮಾಲಿ ಪಾಟೀಲ ಧಂಗಾಪುರ, ಕೆಪಿಸಿಸಿ ಸದಸ್ಯ ಜಗನಾಥ ಶೇಗಜಿ, ಸಿ.ಬಿ.ಪಾಟೀಲ ಓಕಳಿ, ಸಿದ್ದಣ್ಣ ಮಾಸ್ತರ ಶೇಗಜಿ, ವಿರಣ್ಣ ಮಂಗಾಣೆ, ದತ್ತಾ ಅಟ್ಟೂರ ಮಾತನಾಡಿದರು. ಆಳಂದ ಬ್ಲಾಕ್ ಅಧ್ಯಕ್ಷ ಮಹ್ಮದ್ ಮಕದುಮ್ ಅನ್ಸಾರಿ, ಮಾದನ ಹಿಪ್ಪರ್ಗಾ ಬ್ಲಾಕ್ ಅಧ್ಯಕ್ಷ ಬಸವಂತ­ರಾವ ಮಾಲಿ ಪಾಟೀಲ ಧಂಗಾಪುರ, ಕಾರ್ಯದರ್ಶಿ ತಾನಾಜಿ ಸೂರ್ಯ­ವಂಶಿ, ಪಿರ್ದೋಶಿ ಅನ್ಸಾರಿ, ಶಂಕರ­ರಾವ ದೇಶಮುಖ, ಜಿ.ಪಂ. ಮಾಜಿ ಸದಸ್ಯ ಶಿವರಾಜ ಬಾಸಗಿ, ಭಾಲಚಂದ್ರ ಸೂರ್ಯವಂಶಿ ಮತ್ತಿತರರು ಇದ್ದರು. ಬಸವರಾಜ ಬಿರಾದಾರ ನೆಲ್ಲೂರು ನಿರೂಪಿಸಿ, ಹಣಮಂತ ಬಿರಾದಾರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry