ಮೋದಿ ಆಯ್ಕೆ: ಯಾರು ಏನಂತಾರೆ...

7

ಮೋದಿ ಆಯ್ಕೆ: ಯಾರು ಏನಂತಾರೆ...

Published:
Updated:

ವಾಜಪೇಯಿ ನಂತರ ಸಮರ್ಥ ನಾಯಕ

ವಾಜಪೇಯಿ ನಂತರ ದೇಶದ ಪ್ರಧಾನಿ ಹುದ್ದೆಗೆ ಸಮರ್ಥ ನಾಯಕರೊಬ್ಬರು ಸಿಕ್ಕಿದ್ದಾರೆ. ಮೋದಿಯಂಥ ವ್ಯಕ್ತಿತ್ವ ದೇಶಕ್ಕೆ ಇಂದು ಅನಿವಾರ್ಯ ಆಗಿತ್ತು. ಈ ಬೆಳವಣಿಗೆ ಜಿಲ್ಲೆಯ ರಾಜಕೀಯದಲ್ಲೂ ಹೊಸ ಬದಲಾವಣೆಗಳಿಗೆ ದಾರಿಯಾಗಲಿದೆ. ಪ್ರಾದೇಶಿಕ ಪಕ್ಷ ಯಶಸ್ವಿಯಾಗಲಿದೆ ಎಂಬ ವಿಶ್ವಾಸದಿಂದ ಕೆಜೆಪಿಗೆ ಹೋಗಿದ್ದ ಸ್ಥಳೀಯ ಮುಖಂಡರು ಶೀಘ್ರ ಬಿಜೆಪಿಗೆ ವಾಪಸ್‌ ಬರಲಿದ್ದಾರೆ.

–ಲಿಂಗರಾಜ ಪಾಟೀಲ, ಬಿಜೆಪಿ ಮುಖಂಡದಾರಿ ಸುಗಮವಾಗಿಸಿದೆ

ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಘೋಷಣೆ ಕೆಜೆಪಿ–ಬಿಜೆಪಿ ಒಂದುಗೂಡಲು ದಾರಿ ಸುಗಮವಾಗಿಸಿದೆ. ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ನಿರ್ಧಾರವನ್ನು ಗೌರವಿಸಲಿದ್ದೇವೆ.

–ಸಿ.ಎಂ. ನಿಂಬಣ್ಣವರ, ಕೆಜೆಪಿ ಮುಖಂಡಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದು ತಪ್ಪು

ಚುನಾವಣೆಯ ಪೂರ್ವದಲ್ಲಿಯೇ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದು ತಪ್ಪು. ಇದರಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ. ಪಕ್ಷ ಬಹುಮತ ಪಡೆದ ನಂತರ ನಾಯಕನನ್ನು ಆಯ್ಕೆ ಮಾಡಿದ್ದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಬೆಲೆ ಕೊಟ್ಟಂತಾಗುತ್ತಿತ್ತು.

ರಾಜಣ್ಣ ಕೊರವಿ, ಜೆಡಿಎಸ್‌ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ

ಮೋದಿ ಕೆಟ್ಟ ಮಾದರಿ...

ನರೇಂದ್ರ ಮೋದಿ ಅವರನ್ನು ಬಿಜೆಪಿಯವರೇ ಒಪ್ಪುತ್ತಿಲ್ಲ ಇನ್ನು ದೇಶದ ಜನತೆ ಹೇಗೆ ಒಪ್ಪುತ್ತಾರೆ? ವಿವಿಧ ಧರ್ಮ, ಭಾಷೆ ಹಾಗೂ ವೈವಿಧ್ಯತೆಯಿಂದ ಕೂಡಿದ ದೇಶಕ್ಕೆ ಮೋದಿ ಕೆಟ್ಟ ಮಾದರಿಯ ವ್ಯಕ್ತಿ. ಅವರು ಪ್ರಚಾರಕ್ಕೆ ಬಂದ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ಸೋಲು ಅನುಭವಿಸಿತು. ಕೇಂದ್ರದಲ್ಲೂ ಅದೇ ಪರಿಸ್ಥಿತಿ ಬರಲಿದೆ.

–ಎ.ಎಂ.ಹಿಂಡಸಗೇರಿ, ಕಾಂಗ್ರೆಸ್‌ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry