ಮೋದಿ ಎಬಿಸಿಡಿಗೆ ಕಾಂಗ್ರೆಸ್ ನ ‘ಎಫ್‌’ ‘ ಜಿ’ ತಿರುಗೇಟು

7

ಮೋದಿ ಎಬಿಸಿಡಿಗೆ ಕಾಂಗ್ರೆಸ್ ನ ‘ಎಫ್‌’ ‘ ಜಿ’ ತಿರುಗೇಟು

Published:
Updated:

ಲೂಧಿಯಾನ/ನವದೆಹಲಿ (ಪಿಟಿಐ): ಕಾಂಗ್ರೆಸ್‌ ಸರ್ಕಾರದ ‘ಭ್ರಷ್ಟಾಚಾರ’­ವನ್ನು ‘ಎಬಿಸಿಡಿ’ ವರ್ಣಮಾಲೆ ಅಕ್ಷರ ಬಳಸಿ ಟೀಕಿಸಿದ್ದ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ  ನರೇಂದ್ರ ಮೋದಿ ಅವರಿಗೆ ಗುರು­ವಾರ ಕಾಂಗ್ರೆಸ್‌ ತಿರುಗೇಟು ನೀಡಿದೆ.ಕೇಂದ್ರ ಮಾಹಿತಿ ಮತ್ತು ವಾರ್ತಾ ಸಚಿವ ಮನೀಷ್‌ ತಿವಾರಿ ಅವರು ಮೋದಿ ಅವರನ್ನು ‘ಎಫ್‌’ (ಫೇಕ್‌ (ನಕಲಿ) ಎನ್‌­ಕೌಂಟರ್‌) ಮತು್ತ ‘ಜಿ’ (ಜಿನೋಸೈಡ್‌– ನರಹತೆ್ಯ) ಪದ­ಗಳಿಂದ  ಅಣಕಿಸಿದ್ದಾರೆ.ಇನ್ನೊಬ್ಬ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್‌ ಅವರು ಎದುರಾಳಿ ಬ್ಯಾಟ್ಸಮನ್‌ರನ್ನು ಮಣಿ­ಸಲು ‘ಬಾಡಿಲೈನ್‌’ ಬೋಲಿಂಗ್‌ ಪ್ರಯೋ­ಗಿಸುತ್ತಿದ್ದ ವಿವಾದಿತ ಇಂಗ್ಲೀಷ್‌ ಕ್ರಿಕೆಟ್‌ ತಂಡದ ನಾಯಕ ಡಗ್ಲಾಸ್‌ ರಾಬರ್ಟ್‌ ಜಾರ್ಡಿನ್‌ ಅವ­ರಿಗೆ ಮೋದಿ ಅವರನ್ನು ಹೋಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry