ಸೋಮವಾರ, ಡಿಸೆಂಬರ್ 9, 2019
20 °C

ಮೋದಿ ಕೈ ಬಿಟ್ಟ ಸಚಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಕೈ ಬಿಟ್ಟ ಸಚಿವರು

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೇಂದ್ರ ಸಚಿವ ಸಂಪುಟ ಪುನರ್‍‌ರಚನೆಮಾಡಿದ್ದು, ಸಂಪುಟದಿಂದ ಐವರು ಸಚಿವರನ್ನು ಕೈಬಿಟ್ಟಿದ್ದಾರೆ.ಜಲಸಂಪನ್ಮೂಲ ಸಚಿವರಾದ ಸನ್ವಾರ್‌ ಲಾಲ್‌, ಪಂಚಾಯತ್‌ ರಾಜ್‌ ಸಚಿವರಾದ ನಿಹಾಲ್‌ ಚಂದ್‌, ಮಾನವ ಸಂಪನ್ಮೂಲ ಸಚಿವರಾದ ರಾಮ್‌ ಶಂಕರ್‌ ಕಟೇರಿಯಾ, ಮನ್ಷುಬಾಯಿ ವಸವಾ (ಬುಡಕಟ್ಟು) ಮೊಹನ್‌ಬಾಯಿ ಕುಂದರಿಯಾ (ಕೃಷಿ) ಅವರುಗಳನ್ನು ಸಂಪುಟದದಿಂದ ಕೈ ಬಿಡಲಾಗಿದೆ.ಸಂಪುಟದಿಂದ ಕೈಬಿಡಲಾಗಿರುವ ಸಚಿವರು ರಾಜ್ಯಖಾತೆಗಳನ್ನು ಹೊಂದಿದ್ದರು. ಚುರುಕು ಮತ್ತು ದಕ್ಷವಾಗಿ ಖಾತೆಗಳನ್ನು ನಿಭಾಯಿಸುತ್ತಿಲ್ಲದಿದ್ದರಿಂದ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಪ್ರಧಾನಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)