ಶನಿವಾರ, ಫೆಬ್ರವರಿ 27, 2021
21 °C

ಮೋದಿ ಗೆಲುವಿಗೆ ಮತ್ತೊಬ್ಬ ‘ಮೋದಿ’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಗೆಲುವಿಗೆ ಮತ್ತೊಬ್ಬ ‘ಮೋದಿ’!

ವಡೋದರ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬಿಡುವಿಲ್ಲದೆ ದೇಶದಾದ್ಯಂತ ಪ್ರಚಾರ ನಡೆಸುತ್ತಿದ್ದರೆ, ಥೇಟ್‌ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಮೋದಿ ಸ್ಪರ್ಧಿಸುತ್ತಿರುವ ವಡೋದರ ಲೋಕಸಭೆ ಕ್ಷೇತ್ರದಲ್ಲಿ ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.ಮೋದಿ ಗೆಲುವಿಗಾಗಿ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿರುವ ವ್ಯಕ್ತಿ ಹೆಸರು ಜಿತೇಂದ್ರ ವ್ಯಾಸ್‌. ಮೋದಿ ಅವರನ್ನು ಬೆಂಬಲಿಸುವಂತೆ ಕೋರಿ ವ್ಯಾಸ್‌ ಅವರು ಶುಕ್ರವಾರದಿಂದ ನಗರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಪ್ರಚಾರಕ್ಕೂ ಮುನ್ನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಮರೆತಿಲ್ಲ.ಮೋದಿ ಅವರಂತೆ ಕಾಣಿಸಿಕೊಳ್ಳುವ ವ್ಯಾಸ್‌ ಅವರನ್ನು ಜನ ಅಕ್ಕರೆಯಿಂದ ಬರಮಾಡಿಕೊಂಡು ಮಾಲೆ ಹಾಕುತ್ತಿದ್ದಾರೆ. ‘ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ. ಮೋದಿ ಪ್ರಧಾನಿ ಹುದ್ದೆಗೆ ಏರಬೇಕು’ ಎಂದು ವ್ಯಾಸ್‌ ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.