ಮೋದಿ ನೇಮಕಕ್ಕೆ ಅಡ್ವಾಣಿ ಸಮ್ಮತಿ

7

ಮೋದಿ ನೇಮಕಕ್ಕೆ ಅಡ್ವಾಣಿ ಸಮ್ಮತಿ

Published:
Updated:

 ಕೊರ್ಬಾ,ಛತ್ತಿಸ್‌ಗಡ (ಪಿಟಿಐ): ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ನೇಮಿಸಿದ್ದಕ್ಕಾಗಿ ಮುನಿಸಿಕೊಂಡಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಸೋಮವಾರ ಪಕ್ಷದ ನಿರ್ಧಾರಕ್ಕೆ ಕೊನೆಗೂ ಸಮ್ಮತಿ ಸೂಚಿಸಿದ್ದಾರೆ.

`ನನ್ನ ಪಕ್ಷ ಬಿಜೆಪಿ, ದೇಶದ ಜವಾಬ್ದಾರಿಯ ಹೊಣೆಯನ್ನು ಅವರಿಗೆ (ಮೋದಿ) ವಹಿಸಿದ್ದು, ವಿವಿಧ ರಾಜ್ಯಗಳಲ್ಲಿ ನಮ್ಮ ಪಕ್ಷದ ಸರ್ಕಾರಗಳು  ಮಾಡಿರುವ ಉತ್ತಮ ಕಾರ್ಯಗಳನ್ನು ದೇಶದಾದ್ಯಂತ ಪುನರಾವರ್ತಿಯಾಗಲಿವೆ' ಎಂದು ಮೋದಿ ನೇಮಕದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ರ್‍ಯಾಲಿಯಲ್ಲಿ ಕಾಣಿಸಿಕೊಂಡ ಅಡ್ವಾಣಿ ನುಡಿದಿದ್ದಾರೆ.

`ಎಲ್ಲಾ ಹಳ್ಳಿಗಳಲ್ಲಿ ದಿನದ 24 ಗಂಟೆಯೂ ವಿದ್ಯುತ್ ಸೌಲಭ್ಯ ನೀಡಿರುವ ದೇಶದ ಮೊದಲ ರಾಜ್ಯ ಎಂಬ ಕೀರ್ತಿ ಗುಜರಾತ್‌ಗಿದೆ. ಅದರ ಶ್ರೇಯಸ್ಸು ನರೇಂದ್ರ ಮೋದಿಗೆ ಅವರಿಗೆ ಸಲ್ಲುತ್ತದೆ' ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ನೇಮಕಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಅಡ್ವಾಣಿ ಅಭಿಪ್ರಾಯ ಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry