ಮೋದಿ ಪರ ಶೆಟ್ಟರ್, ಈಶ್ವರಪ್ಪ ಪ್ರಚಾರ

7

ಮೋದಿ ಪರ ಶೆಟ್ಟರ್, ಈಶ್ವರಪ್ಪ ಪ್ರಚಾರ

Published:
Updated:

ಬೆಳಗಾವಿ: ನರೇಂದ್ರ ಮೋದಿ ಪರ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಗುಜರಾತ್‌ಗೆ ತೆರಳುವರು.



ಮೋದಿ ಸ್ಪರ್ಧಿಸಿರುವ ಮಣಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣಕ್ಕೆ ಈ ಇಬ್ಬರೂ ಮುಖಂಡರು ಪ್ರಚಾರಕ್ಕೆ ತೆರಳುತ್ತಿದ್ದಾರೆ. ಸ್ವತಃ ಮೋದಿ ಅವರೇ ದೂರವಾಣಿ ಕರೆ ಮಾಡಿ, ಪ್ರಚಾರಕ್ಕೆ ಬರಬೇಕೆಂದು ಆಹ್ವಾನ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಮುಗಿಸಿಕೊಂಡು ಇದೇ 7ರ ಸಂಜೆ ನವದೆಹಲಿಗೆ ತೆರಳುವ ಅವರು, 8ರಂದು ಗುಜರಾತ್‌ನಲ್ಲಿ  ಪ್ರಚಾರ ಮಾಡಲಿದ್ದಾರೆ. 9ರಂದು ವಾಪಸಾಗಲಿದ್ದಾರೆ.



ಸಮಿತಿ ನೇಮಕ (ಮಂಗಳೂರು ವರದಿ):  ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಿಸುವ ಅಥವಾ ಪತ್ರಿಕಾ ಸ್ವಾತಂತ್ರ್ಯದ ದುರ್ಬಳಕೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಟ್ಜು ಮಂಡಳಿಯ ನಾಲ್ವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ನೇಮಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry