ಮೋದಿ ಪರ ಸಾಮಾಜಿಕ ಜಾಲತಾಣ ಬಳಕೆ

7
ಬಿಜೆಪಿ ಅಧ್ಯಕ್ಷ ರಾಜನಾಥ್‌ಸಿಂಗ್

ಮೋದಿ ಪರ ಸಾಮಾಜಿಕ ಜಾಲತಾಣ ಬಳಕೆ

Published:
Updated:

ನವದೆಹಲಿ (ಪಿಟಿಐ):  `ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ ದಿನದಿಂದಲೇ ಅವರ ವಿರುದ್ಧ ಟೀಕೆಗಳು ಆರಂಭವಾಗಿದ್ದು , ಭವಿಷ್ಯತ್ತಿನಲ್ಲಿ ಇಂತಹ ಟೀಕೆಗಳು ಮತ್ತಷ್ಟು ಹೆಚ್ಚಬಹುದು' ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.ಬಿಜೆಪಿಯ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜನಾಥ್, `ನಮ್ಮ ಜನಪ್ರಿಯ ಮುಖ್ಯಮಂತ್ರಿ ನರೇಂದ್ರ ಭಾಯಿ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ನಾವು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಸತ್ಯ ಯಾವತ್ತೂ ಸತ್ಯವೇ. ನಾವು ಇದನ್ನೆಲ್ಲ ಒಗ್ಗಟ್ಟಾಗಿ ಎದುರಿಸುತ್ತೇವೆ. ಈ ಉದ್ದೇಶಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮೋದಿ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿರುವುದನ್ನು ಜನಕ್ಕೆ ತಿಳಿಸುತ್ತೇವೆ' ಎಂದರು.ಮೋದಿ ಕುರಿತು ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಪಕ್ಷದ `ಇ-ಕಾರ್ಯಕರ್ತ'ರು  ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ತನ್ನ ಸಾಧನೆಗಳನ್ನು ಮುಂದಿಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಸಾಧ್ಯವಾಗದು ಎಂಬ ಅರಿವು ಯುಪಿಎ ಸರ್ಕಾರಕ್ಕೆ ಆಗಿದೆ, ಈ ವೈಫಲ್ಯಗಳನ್ನು ಜನರಿಂದ ಮರೆಮಾಚಲು ಸರ್ಕಾರ ಕೋಮುವಾದ ವಿರುದ್ಧ ಜಾತ್ಯಾತೀತತೆ ವಿಷಯವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಸಿಂಗ್ ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry