ಮೋದಿ ಪ್ರಚಾರಕ್ಕಾಗಿ ಬಿಚ್ಚಮ್ಮಳಾಗಿದ್ದ ನಟಿ ಈಗ ಎನ್ಸಿಪಿಗೆ ಸೇರ್ಪಡೆ

ವಡೋದರಾ: 2014ರಲ್ಲಿ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿ ಅರೆನಗ್ನಳಾಗಿ ಪ್ರಚಾರ ಮಾಡಿದ್ದ ನಟಿ, ರೂಪದರ್ಶಿ ಮೇಘನಾ ಪಟೇಲ್ ಇದೀಗ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ)ಗೆ ಸೇರಿದ್ದಾರೆ.
ಮೋದಿಯವರಿಗೆ ಬೆಂಬಲ ಸೂಚಿಸಿ ಅರೆನಗ್ನ ಫೋಟೋಗಳನ್ನು ಪ್ರದರ್ಶಿಸುವ ಮೂಲಕ ಮೇಘನಾ ಸುದ್ದಿಯಾಗಿದ್ದಳು.
ತಾವರೆಯಿಂದ ದೇಹವನ್ನು ಅರ್ಧಂಬರ್ಧ ಮುಚ್ಚಿ ಈ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ಮೇಘನಾ ಜನರ ಗಮನ ಸೆಳೆದಿದ್ದಳು.
ದಕ್ಷಿಣ ಭಾರತದ ಸಿನಿಮಾಗಳು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಮೇಘನಾ ಈಗ ಎನ್ಸಿಪಿ ಸೇರಿದ್ದಾರೆ ಎಂದು ಎನ್ಸಿಪಿ ಪಕ್ಷದ ಹಿರಿಯ ನಾಯಕ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಆದಾಗ್ಯೂ, 2017ರಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೇಘನಾ ಅವರನ್ನು ಮಡೋದರಾದಿಂದ ಕಣಕ್ಕಿಳಿಸುವ ಇರಾದೆ ಎನ್ಸಿಪಿಗೆ ಇದೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.