ಮೋದಿ ಬಗ್ಗೆ ಮತ್ತೆ ಮತ್ತೆ ವಿವರಣೆ ನೋವುಂಟು ಮಾಡಿದೆ: ಹಜಾರೆ

7

ಮೋದಿ ಬಗ್ಗೆ ಮತ್ತೆ ಮತ್ತೆ ವಿವರಣೆ ನೋವುಂಟು ಮಾಡಿದೆ: ಹಜಾರೆ

Published:
Updated:
ಮೋದಿ ಬಗ್ಗೆ ಮತ್ತೆ ಮತ್ತೆ ವಿವರಣೆ ನೋವುಂಟು ಮಾಡಿದೆ: ಹಜಾರೆ

ಅಹಮದಾಬಾದ್ (ಪಿಟಿಐ): ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ತಮ್ಮಿಂದ ಪ್ರಶಂಸೆ ಪಡೆದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಮತ್ತೆ ಮತ್ತೆ ವಿವರಣೆ ನೀಡಬೇಕಾಗಿ ಬಂದಿರುವುದು ನನಗೆ ಅತೀವ ನೋವುಂಟು ಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ.~ಮೊತ್ತ ಮೊದಲಿಗೇ ಹೇಳಿ ಬಿಡುತ್ತೇನೆ. ನಾನು ಸಂಪೂರ್ಣವಾಗಿ ರಾಜಕೀಯೇತರ ವ್ಯಕ್ತಿ ಮತ್ತು ಕೋಮುವಾದದ ಬದ್ಧ ವಿರೋಧಿ~ ಎಂದು ಹಜಾರೆ ಅವರು ನೃತ್ಯಪಟು ಹಾಗೂ ಕಾರ್ಯಕರ್ತೆ ಮಲ್ಲಿಕಾ ಸಾರಾಭಾಯಿ ಅವರಿಗೆ ಮಂಗಳವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಮೋದಿ ಅವರನ್ನು ಪ್ರಶಂಸಿದ್ದಕ್ಕಾಗಿ ಆಘಾತ ವ್ಯಕ್ತ ಪಡಿಸಿ ಸಾರಾಭಾಯಿ ಅವರು ಅಣ್ಣಾ ಹಜಾರೆ ಅವರಿಗೆ ಕಳುಹಿಸಿದ್ದ ಇ-ಮೇಲ್ (ಮಿಂಚಂಚೆ) ಪತ್ರಕ್ಕೆ ಭ್ರಷ್ಟಾಚಾರ ವಿರೋಧಿ ಹೋರಾಟದ ನೇತಾರ ಈ ಪ್ರತಿಕ್ರಿಯೆ ನೀಡಿದ್ದಾರೆ.~ಮೋದಿ ಅವರ ಕುರಿತು ಮತ್ತೆ ಮತ್ತೆ ವಿವರಣೆ ನೀಡಬೇಕಾಗಿ ಬಂದಿರುವುದು ನನಗೆ ನೋವುಂಟು ಮಾಡಿದೆ. ಗುಜರಾತ್ ಮತ್ತು ಬಿಹಾರ ಮುಖ್ಯಮಂತ್ರಿಗಳ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮ ವರದಿಗಳನ್ನು ಆಧರಿಸಿ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನನ್ನನ್ನು ಪ್ರಶ್ನಿಸಲಾಗಿತ್ತು. ಬಿಹಾರ ಮತ್ತು ಗುಜರಾತ್ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿವೆ ಎಂದು ನಾನು ಹೇಳಿದ್ದೇನೆ~ ಎಂದು ಹಜಾರೆ ಅವರು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ತಮ್ಮ ಸ್ವಗ್ರಾಮ ರಾಲೇಗಾಂ ಸಿದ್ಧಿಯಿಂದ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry