ಶುಕ್ರವಾರ, ನವೆಂಬರ್ 15, 2019
20 °C

ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿ: ನಿಲುವು ಸ್ಪಷ್ಟನೆಗೆ ಒತ್ತಡ?

Published:
Updated:

ನವದೆಹಲಿ (ಐಎಎನ್‌ಎಸ್): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಮಧ್ಯೆಯೇ, ಈ ಕುರಿತು ಶೀಘ್ರವೇ ನಿಲುವು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಮೇಲೆ ಜೆಡಿಯು ಒತ್ತಡ ಹೇರುವ ಸಾಧ್ಯತೆ ಇದೆ.ಏ.13-14ರಂದು ನಡೆಯಲಿರುವ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ಸಂಬಂಧ ಬಿಜೆಪಿ ಮೇಲೆ ಒತ್ತಡ ಹಾಕಬಹುದು ಎನ್ನಲಾಗಿದೆ. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವುದನ್ನು ಜೆಡಿಯು ಬಲವಾಗಿ ವಿರೋಧಿಸುತ್ತಿದ್ದು, ಈ ಕುರಿತು ಕಾರ‌್ಯಕಾರಿಣಿಯಲ್ಲಿ ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ. ಜೆಡಿಯು ಅಧ್ಯಕ್ಷ ಶರದ್‌ಯಾದವ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ

ಪ್ರತಿಕ್ರಿಯಿಸಿ (+)