ಮೋದಿ-ಭಾಗವತ್ ಸಮಾಲೋಚನೆ

7

ಮೋದಿ-ಭಾಗವತ್ ಸಮಾಲೋಚನೆ

Published:
Updated:

ನಾಗಪುರ (ಪಿಟಿಐ): `ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಯಾರನ್ನು ಬಿಂಬಿಸಬೇಕು ಎಂಬ ವಿಷಯದಲ್ಲಿ ಆರ್‌ಎಸ್‌ಎಸ್ ತಲೆ ಹಾಕುವುದಿಲ್ಲ~ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಸಂಘದ ವರಿಷ್ಠ ಮೋಹನ್ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.`ಆರ್‌ಎಸ್‌ಎಸ್ ತಮ್ಮನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಸಾಧ್ಯತೆ ಇದೆಯೇ~ ಎಂಬ ಪ್ರಶ್ನೆ ಉತ್ತರಿಸಿದ ಮೋದಿ, ಈ ವಿಷಯದಲ್ಲಿ ಸಂಘ ಮಧ್ಯೆ ಪ್ರವೇಶಿಸುವುದಿಲ್ಲ ಎಂದರು.ಮೋದಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಬೇಕು ಎಂದು ಸಂಸದ ರಾಂ ಜೇಠ್ಮಲಾನಿ ಇತ್ತೀಚೆಗೆ ಸಲಹೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ನಗರಕ್ಕೆ ಬಂದಿಳಿದ ಮೋದಿ, `ಇದೊಂದು ಸೌಜನ್ಯದ ಭೇಟಿ. ಅನೇಕ ವರ್ಷಗಳಿಂದ ಸಂಘದ ಪ್ರಮುಖರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಅವರನ್ನು ಭೇಟಿಯಾಗಲು ಬಂದೆ. ಇದಕ್ಕೆ ಬೇರ‌್ಯಾವ ರಾಜಕೀಯ ಅರ್ಥಗಳನ್ನು ಕಲ್ಪಿಸಬೇಕಾಗಿಲ್ಲ~ ಎಂದು ಪ್ರತಿಕ್ರಿಯಿಸಿದರು.  ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಕ್ವಿ ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ.

ಕೇಶುಭಾಯ್ ಪಟೇಲ್ ಪ್ರಶ್ನೆ

ನಾಗಪುರಕ್ಕೆ ತೆರಳಿ ಸಂಘದ ಪ್ರಮುಖರನ್ನು ಭೇಟಿಯಾಗಿರುವ ಮೋದಿ ಅವರ ನಿರ್ಧಾರವನ್ನು ಗುಜರಾತ್ ಪರಿವರ್ತನಾ ಪಕ್ಷ (ಜಿಪಿಪಿ)ದ ಮುಖ್ಯಸ್ಥ ಕೇಶುಭಾಯ್ ಪಟೇಲ್ ಕಟುವಾಗಿ ಟೀಕಿಸಿದ್ದಾರೆ.`ಭಾರಿ ತುರುಸಿನಿಂದ ಕೂಡಿರುವ ಚುನಾವಣೆಗಳನ್ನು ಎದುರಿಸುವುದು ಕಷ್ಟ ಎಂಬ ಸುಳಿವು ಅರಿತ ಮೋದಿ ಅವರಿಗೆ ಏಕಾಏಕಿ ಸಂಘ ಪರಿವಾರದ ನಾಯಕರು ನೆನಪಾಗಿದ್ದಾರೆ~ ಎಂದು ಲೇವಡಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry