ಮೋದಿ: ಮತ್ತೆ 1ದಿನ ಉಪವಾಸ

7

ಮೋದಿ: ಮತ್ತೆ 1ದಿನ ಉಪವಾಸ

Published:
Updated:

ದ್ವಾರಕಾ (ಗುಜರಾತ) (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾನುವಾರ ಜಾಮನಗರ ಜಿಲ್ಲೆ ದ್ವಾರಕಾದಲ್ಲಿ ತಮ್ಮ ಎರಡನೇ ಹಂತದ ಒಂದು ದಿನದ ಸದ್ಭಾವನಾ ಉಪವಾಸ ಸತ್ಯಾಗ್ರಹ ನಡೆಸಿದರು.ಇದಕ್ಕೆ ಪರ್ಯಾಯವಾಗಿ ಜಾಮನಗರದ ಕಾಂಗ್ರೆಸ್ ಸಂಸದ ವಿಕ್ರಂ ಮದಮ್ ಸ್ಥಳೀಯ ಶಾಸಕರೊಂದಿಗೆ ಮೋದಿ ಉಪವಾಸ ಸ್ಥಳದಿಂದ ಮೂರು ಕಿಮೀ ದೂರದ ಸ್ಥಳದಲ್ಲಿ 1 ದಿನದ ಉಪವಾಸ ನಡೆಸಿದರು.ಬೆಳಿಗ್ಗೆ ಇಲ್ಲಿಗೆ ಆಗಮಿಸಿದ ಮೋದಿ, ವಾರ್ತಾ ಇಲಾಖೆ ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿದರು. ನಂತರ ಸಾರ್ವಜನಿಕ ಸಭೆಯಲ್ಲಿ `ಯಾವುದೇ ಲಾಭಕ್ಕಾಗಿ ಈ ಉಪವಾಸ ಸತ್ಯಾಗ್ರಹ ನಡೆಸುತ್ತಿಲ್ಲ. ಗುಜರಾತ್ ರಾಜ್ಯದ ಹೆಸರು ಕೆಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ.~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry