ಶನಿವಾರ, ನವೆಂಬರ್ 23, 2019
17 °C

`ಮೋದಿ ವಿರುದ್ಧ ಟೀಕೆ ದುರದೃಷ್ಟಕರ'

Published:
Updated:

ಪಟ್ನಾ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಜೆಡಿಯು ಮುಖಂಡರು ನಡೆಸುತ್ತಿರುವ ವಾಗ್ದಾಳಿಯನ್ನು ಖಂಡಿಸುವವರ ಪಟ್ಟಿಗೆ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕೂಡ ಸೇರಿದ್ದಾರೆ. ಜೆಡಿಯು ಟೀಕೆ ದುರದೃಷ್ಟಕರ ಎಂದಿದ್ದಾರೆ.`ಇದು ಅನಗತ್ಯ ಬೆಳವಣಿಗೆ. ಈ ಕುರಿತು ಪಕ್ಷದ ಸಂಸದೀಯ ಮಂಡಳಿ ಸೂಕ್ತ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಲಿದೆ' ಎಂದು ಬಿಹಾರದ ಬಿಜೆಪಿ ಹಿರಿಯ ಮುಖಂಡರೂ ಆದ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವ್ಯವಹಾರಗಳನ್ನು ಗಮನಿಸುವ ಪಕ್ಷದ ಕೇಂದ್ರೀಯ ಸಮಿತಿ ಸದಸ್ಯರು ಮತ್ತು ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಇದೇ ಗುರುವಾರ      (ಏ. 18) ಸಭೆ ನಡೆಸಲಿದ್ದಾರೆ ಎಂದಿದ್ದಾರೆ.`ನರೇಂದ್ರ ಮೋದಿ ವಿರುದ್ಧ ಜೆಡಿಯು ಮಾಡಿರುವ ಟೀಕೆಯಿಂದ ರಾಜ್ಯದಲ್ಲಿ ಆ ಪಕ್ಷದ ಜೊತೆಗಿನ ಮೈತ್ರಿಗೆ ಧಕ್ಕೆಯಾಗಲಿದೆಯೇ' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.ಈ ಮಧ್ಯೆ, ನಿತೀಶ್ ಕುಮಾರ್ ಅವರ ಧೋರಣೆಯನ್ನು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಪಶುಸಂಗೋಪನಾ ಖಾತೆ ಸಚಿವ ಗಿರಿರಾಜ್ ಸಿಂಗ್ ಅವರು ಖಂಡಿಸಿದ್ದಾರೆ.

ಪ್ರತಿಕ್ರಿಯಿಸಿ (+)