ಮೋದಿ ವೀಸಾ ನಿರ್ಬಂಧ ಮುಂದುವರಿಸಲು ಯುಎಸ್ ಕಾಂಗ್ರೆಸ್ ಸದಸ್ಯರ ಒತ್ತಾಯ

7

ಮೋದಿ ವೀಸಾ ನಿರ್ಬಂಧ ಮುಂದುವರಿಸಲು ಯುಎಸ್ ಕಾಂಗ್ರೆಸ್ ಸದಸ್ಯರ ಒತ್ತಾಯ

Published:
Updated:

ವಾಷಿಂಗ್ಟನ್ (ಪಿಟಿಐ): ಭಾರತದ ಪ್ರಧಾನಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವಿಧಿಸಿರುವ ವೀಸಾ ನಿರ್ಬಂಧವನ್ನು ಎಂದಿನಂತೆ ಮುಂದುವರೆಸಬೇಕು ಎಂದು 25 ಸದಸ್ಯರನ್ನೊಳಗೊಂಡ ಅಮೆರಿಕ ಕಾಂಗ್ರೆಸ್ ಸದಸ್ಯರ ಗುಂಪು ರಾಜ್ಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರನ್ನು ಒತ್ತಾಯಿಸಿದೆ.

`ಮೋದಿ ಅವರು 2002ರಲ್ಲಿ ರಾಜ್ಯದಲ್ಲಿ ನಡೆದ ಗಲಭೆಯಲ್ಲಿ ನೊಂದವರಿಗೆ ಸಮರ್ಪಕವಾದ ನ್ಯಾಯವನ್ನು ಒದಗಿಸಿರುವುದಿಲ್ಲ ಎಂದು ಆರೋಪಿಸುವುದರೊಂದಿಗೆ ಅವರಿಗೆ ವಿಧಿಸಿರುವ ವೀಸಾ ನಿರ್ಬಂಧವನ್ನು ಮುಂದುವರೆಸಬೇಕು' ಎಂದು ಅಮೆರಿಕ ಕಾಂಗ್ರೆಸ್ ಸದಸ್ಯರ ಗುಂಪು ಪತ್ರದ ಮೂಲಕ ಕ್ಲಿಂಟನ್ ಅವರಲ್ಲಿ ಕೇಳಿಕೊಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry