ಶುಕ್ರವಾರ, ಮಾರ್ಚ್ 5, 2021
30 °C
ಭಯೋತ್ಪಾದನೆಗೆ ಕುಮ್ಮಕ್ಕು: ರಾಷ್ಟ್ರಧ್ವಜ, ಪ್ರಧಾನಿ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು

ಮೋದಿ ಹೇಳಿಕೆಗೆ ಪಾಕ್‌ನಲ್ಲಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಹೇಳಿಕೆಗೆ ಪಾಕ್‌ನಲ್ಲಿ ಆಕ್ರೋಶ

ಇಸ್ಲಾಮಾಬಾದ್ (ಐಎಎನ್ಎಸ್): ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ  ಭಾರತಕ್ಕೆ ಕಿರುಕುಳ ನೀಡುತ್ತಿದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು  ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪ್ರತಿಭಟನೆ ನಡೆಸಿವೆ.‘ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ಭಾರತ ದೌರ್ಜನ್ಯ ನಡೆಸುತ್ತಿದೆ ಮತ್ತು ಭಾರತದ್ದು ಯುದ್ಧ ಪ್ರೀತಿ’ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪಾಕಿಸ್ತಾನ ಮುಸ್ಲಿಂ ಲೀಗ್ ಖೈಯ್ದಾ, ಪಾಕಿಸ್ತಾನ ಸುನ್ನಿ ತೆಹ್ರೀಕ್ ಸಂಘಟನೆಗಳು ಭಾರತದ ವಿರುದ್ಧ ಪ್ರತಿಭಟನೆ ನಡೆಸಿವೆ. ಪ್ರತಿಭಟನಾ ರ‍್ಯಾಲಿಯ ಅಂತ್ಯದಲ್ಲಿ ಎರಡೂ ಸಂಘಟನೆಗಳು ಭಾರತದ ಧ್ವಜ ಮತ್ತು ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸಿವೆ.ರ‍್ಯಾಲಿಯ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಮುಸ್ಲಿಂ ಲೀಗ್ ಖೈಯ್ದಾದ ಸಿಂಧ್ ಪ್ರಾಂತದ ಅಧ್ಯಕ್ಷ ಹಲೀಂ ಆದಿಲ್ ಶೇಕ್, ‘ಮೋದಿ ಹೇಳಿಕೆ ಪಾಕಿಸ್ತಾನದ ಜನತೆಗೆ ತುಂಬಾ ನೋವುಂಟು ಮಾಡಿದೆ’ ಎಂದರು. ‘ಪಾಕಿಸ್ತಾನದ ಸೇನೆ ಶಕ್ತಿಶಾಲಿಯಾಗಿದೆ ಮತ್ತು ಅದಕ್ಕೆ ತನ್ನ ತಾಯ್ನಾ ಡನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದು ತಿಳಿದಿದೆ’ ಎಂದು ಅವರು ಹೇಳಿದ್ದಾರೆ.

*

ಮ್ಯಾನ್ಮಾರ್‌ ರಾಯಭಾರಿಯನ್ನು ವಾಪಸ್ ಕಳಿಸಿ

ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯದಲ್ಲಿ ಮ್ಯಾನ್ಮಾರ್ ಭಾಗಿಯಾಗಿದೆ. ಹೀಗಾಗಿ ಪಾಕಿಸ್ತಾನದಲ್ಲಿರುವ ಮ್ಯಾನ್ಮಾರ್ ರಾಯಭಾರಿಯನ್ನು ವಾಪಸ್ ಕಳುಹಿಸಿ ಎಂದು ಒತ್ತಾಯಿಸಿದ್ದಾರೆ.ರೋಹಿಂಗ್ಯಾಗಳ ಹತ್ಯಾಕಾಂಡದ ಬಗ್ಗೆ ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಮೌನ ವಹಿಸಿವೆ ಎಂದು ಜಮಾತ್ ಉದ್ ದಾವಾ ಮುಖಂಡ ಮೌಲಾನ ಖಾರಿ ಮೆಹ್ಮೂದ್ ಆರೋಪಿಸಿದ್ದಾನೆ.

*

ಭಾರತವೇನಾದರೂ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದರೆ, ಅದರ ವಿರುದ್ಧ ಪಾಕಿಸ್ತಾನದ ಇಡೀ ಜನತೆ ತಿರುಗಿ ಬೀಳುತ್ತದೆ

-ಹಲೀಂ ಆದಿಲ್ ಶೇಕ್,

ಪಾಕಿಸ್ತಾನ ಮುಸ್ಲಿಂ ಲೀಗ್ ಸಿಂಧ್ ಘಟಕದ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.