ಮೋದಿ ಹೇಳಿಕೆ ಅಲ್ಲಗಳೆದ ಪಿಟಿಐ

7

ಮೋದಿ ಹೇಳಿಕೆ ಅಲ್ಲಗಳೆದ ಪಿಟಿಐ

Published:
Updated:

ನವದೆಹಲಿ (ಪಿಟಿಐ): ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿದೇಶ ಪ್ರವಾಸಗಳಿಗೆ ಕೇಂದ್ರ ಸರ್ಕಾರ ಮೂರು ವರ್ಷಗಳಲ್ಲಿ 1,880 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬ ಸುದ್ದಿಯನ್ನು ತಾನು ವರದಿ ಮಾಡಿಲ್ಲ ಎಂದು `ಪಿಟಿಐ~ ಸುದ್ದಿ ಸಂಸ್ಥೆ ಸ್ಪಷ್ಟನೆ ನೀಡಿದೆ.ಸೋನಿಯಾ ವಿರುದ್ಧ ವಿದೇಶ ಪ್ರವಾಸ ವೆಚ್ಚದ ಆರೋಪ ಮಾಡುವಾಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪಿಟಿಐ ಸುದ್ದಿ ಸಂಸ್ಥೆಯನ್ನು ಆಧರಿಸಿ ಮಾಹಿತಿ ನೀಡುತ್ತಿರುವುದಾಗಿ ಹೇಳಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಮೋದಿ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಪಿಟಿಐ ತಿಳಿಸಿದೆ.ಸೋನಿಯಾ ಅವರು ಸರ್ಕಾರಿ ವೆಚ್ಚದಲ್ಲಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿರುವ ಮೋದಿ, `ಸಿಎನ್‌ಎನ್- ಐಬಿಎನ್~ ವಾಹಿನಿಗೆ ಗುರುವಾರ ನೀಡಿದ ಸಂದರ್ಶನದಲ್ಲಿ, `ಜುಲೈ ತಿಂಗಳಿನಲ್ಲಿ ಔಟ್‌ಲುಕ್, ಟೈಮ್ಸಆಫ್ ಇಂಡಿಯಾ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳು ಪಿಟಿಐ ಸುದ್ದಿಯನ್ನು ಆಧರಿಸಿ ಸೋನಿಯಾ ವಿದೇಶ ಪ್ರವಾಸದ ಸುದ್ದಿ ಪ್ರಕಟಿಸಿದ್ದವು~ ಎಂದ್ದ್ದಿದರು. ಈ ಸುದ್ದಿ ಪ್ರಕಟವಾಗಿ ಮೂರು ತಿಂಗಳಾದರೂ ಸರ್ಕಾರ ಈವರೆಗೆ ಏಕೆ ಸ್ಪಷ್ಟನೆ ನೀಡಿಲ್ಲ ಎಂದೂ ಪ್ರಶ್ನಿಸ್ದ್ದಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry