ಮೋಸದಾಟಕ್ಕೆ ಹತ್ತು ವರ್ಷ ಜೈಲು

ಶನಿವಾರ, ಜೂಲೈ 20, 2019
22 °C

ಮೋಸದಾಟಕ್ಕೆ ಹತ್ತು ವರ್ಷ ಜೈಲು

Published:
Updated:

ಮೆಲ್ಬರ್ನ್ (ಪಿಟಿಐ):  ಮೋಸದಾಟದಲ್ಲಿ ಭಾಗಿಯಾಗುವ ಕ್ರಿಕೆಟಿಗರಿಗೆ ಹತ್ತು ವರ್ಷ ಜೈಲು ಶಿಕ್ಷೆ ನೀಡುವಂಥ ಕಾನೂನು ರೂಪಿಸುವ ಉದ್ದೇಶದಿಂದ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸೇರಿದಂತೆ ವಿವಿಧ ಕ್ರೀಡಾ ಸಂಘಟನೆಗಳ ಅಧಿಕಾರಿಗಳು ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ.ಶುಕ್ರವಾರ ಸರ್ಕಾರದ ಪ್ರತಿನಿಧಿಗಳು ಹಾಗೂ ಕ್ರೀಡಾ ಸಂಘಟನೆಗಳ ಅಧಿಕಾರಿಗಳ ಸಭೆ ನಡೆಸಲು ನಿರ್ಧರಿಸಲಾಗಿದೆ. ಪ್ರಮುಖ ವೃತ್ತಿಪರ ಹಾಗೂ ಸ್ಪರ್ಧಾ ಕ್ರೀಡೆಗಳ ಸಂಘಟನೆ (ಕಾಂಪ್ಸ್) ಮುಖ್ಯಸ್ಥರೂ ಆಗಿರುವ ಕ್ರಿಕೆಟ್ ಅಸ್ಟ್ರೇಲಿಯಾ ಪ್ರಧಾನ ವ್ಯವಸ್ಥಾಪಕ ಅಧಿಕಾರಿ ಜೇಮ್ಸ ಸುಥರ್ಲೆಂಡ್ ಅವರು ಈಗಾಗಲೇ ಜಾರಿ ಆಗಬೇಕಾದ ಸ್ವರೂಪದ ಕುರಿತು ಕರಡು ಪ್ರತಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ.

 

ಜೇಮ್ಸ ಅವರ ಕಾನೂನು ಸಲಹೆಗಾರರಾಗಿರುವ ಡೀನ್ ಕಿನೊ ಅವರ ಮಾರ್ಗದರ್ಶನದಲ್ಲಿ ಈ ಕರಡು ಪ್ರತಿ ಸಿದ್ಧವಾಗಿದೆ. ಬುಧವಾರ ಕರಡು ಪ್ರತಿಯನ್ನು ಕ್ರೀಡಾ ಸಚಿವ ಮಾರ್ಕ್ ಅರ್ಬಿಬ್ ಅವರಿಗೆ ಸಲ್ಲಿಸಲಿದ್ದಾರೆ. ಎರ ಡು ದಿನಗಳ ನಂತರ ಅಧಿಕೃತವಾಗಿ ಈ ವಿಷಯದ ಕುರಿತು ಚರ್ಚೆ ನಡೆಯಲಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry