ಮೋಸದಾಟ: ಆರು ಅಂಪೈರ್‌ಗಳ ಅಮಾನತಿಗೆ ಐಸಿಸಿ ನಿರ್ಧಾರ

7

ಮೋಸದಾಟ: ಆರು ಅಂಪೈರ್‌ಗಳ ಅಮಾನತಿಗೆ ಐಸಿಸಿ ನಿರ್ಧಾರ

Published:
Updated:

ನವದೆಹಲಿ (ಐಎಎನ್‌ಎಸ್) : ಅಂತರರಾಷ್ಟ್ರೀಯ ಅಂಪೈರ್‌ಗಳು ಮೋಸದಾಟದಲ್ಲಿ ಪಾಲ್ಗೊಳ್ಳಲು ಮುಂದಾಗಿರುವ ವಿಚಾರ ಇಂಡಿಯಾ ಟಿವಿ ನಡೆಸಿದ ಮಾರುವೇಷದ ಕಾರ್ಯಾಚರಣೆಯಿಂದ ಬೆಳಕಿಗೆ ಬಂದ ಬೆನ್ನಲ್ಲೇ  ಸಭೆ ಸೇರಿದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು, ಆರು ಮಂದಿ ಅಂತರರಾಷ್ಟ್ರೀಯ ಅಂಪೈರ್‌ಗಳನ್ನು ಅಮಾನತು ಮಾಡಿ, ಅವರನ್ನು ವಿಚಾರಣೆಗೆ ಒಳಪಡಿಸಲು ಬುಧವಾರ ನಿರ್ಧರಿಸಿತು.ಮೋಸದಾಟದ ಆರೋಪ ಇತ್ಯರ್ಥವಾಗದ ಹೊರತು ಆರು ಮಂದಿ ಅಂಪೈರ್‌ಗಳನ್ನು ಯಾವುದೇ ದೇಸಿ ಕ್ರಿಕೆಟ್ ಅಥವಾ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ನೇಮಿಸಿಕೊಳ್ಳದಿರಲೂ ಐಸಿಸಿ ಮತ್ತು ಅದರ ಸದಸ್ಯ ಮಂಡಳಿ ತೀರ್ಮಾನಿಸಿದೆ.

ಪಾಕಿಸ್ತಾನದ ನದೀಮ್ ಗೌರಿ ಮತ್ತು ಅನೀಸ್ ಸ್ದ್ದಿದಿಕ್, ಬಾಂಗ್ಲಾದೇಶದ ನದೀರ್ ಶಾ ಮತ್ತು ಶ್ರೀಲಂಕಾದ ಗಾಮಿನಿ ದಿಸ್ಸಾನಾಯಕೆ, ಮೌರಿಸ್ ವಿನ್‌ಸ್ಟನ್ ಹಾಗೂ ಸಾಗರ್ ಗಾಳ್ಗೆ ಅಮಾನತುಗೊಂಡಿರುವ ಅಂಪೈರ್‌ಗಳು.ಇದೇ ವೇಳೆ, ಐಸಿಸಿ ಕ್ರಮವನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry