ಗುರುವಾರ , ನವೆಂಬರ್ 14, 2019
19 °C

ಮೌಢ್ಯತೆಯಿಂದ ರಾಷ್ಟ್ರದ ಪ್ರಗತಿಗೆ ಧಕ್ಕೆ

Published:
Updated:

ಗಜೇಂದ್ರಗಡ: ಪ್ರಸ್ತುತ ವೈಜ್ಞಾನಿಕ ಯುಗದಲ್ಲಿಯೂ ನಾಗರಿಕರು ಮೌಢ್ಯ ತೆಯ ಅಂಧಕಾರದಲ್ಲಿ ಸಿಲುಕಿ ವಿಜ್ಞಾನ ದಿಂದ ದೂರ ಉಳಿಯುತ್ತಿರುವುದು ರಾಷ್ಟ್ರದ ಪ್ರಗತಿಗೆ ಹಿನ್ನೆಡೆಯನ್ನುಂಟು ಮಾಡಿದೆ ಎಂದು ಸಂಯುಕ್ತಾ ಬಂಡಿ ಅಭಿಪ್ರಾಯಪಟ್ಟರು.ಇಲ್ಲಿನ ಕಮ್ಮಾರ ಓಣಿಯ ಸರ್ಕಾರಿ ಬಾಲಕಿಯರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಗಸ್ತ್ಯ ಅಂತರ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯಿಂದ ಆಯೋಜಿಸ ಲಾಗಿದ್ದ `ವಿಜ್ಞಾನ ವಸ್ತು ಪ್ರ

ದರ್ಶನ ಹಾಗೂ ಪವಾಡ ರಹಸ್ಯ ಬಯಲು~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಚ್ಚಾಗಿ ಗ್ರಾಮೀಣ ಪ್ರದೇಶದ ನಾಗರಿಕರು ಮೂಢನಂಬಿಕೆ, ವಾಮಾ ಚಾರ, ಮಾಟ-ಮಂತ್ರಗಳನ್ನು ನಂಬಿ ಕೊಂಡು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಅತಂತ್ರ ಬದುಕು ಸಾಗಿಸುತ್ತಿರುವುದು ಬೇಸರದ ಸಂಗತಿ ಯಾಗಿದೆ. ಜನತೆಯ ಮೌಢ್ಯತೆಯನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ಶಕ್ತಿ ಗಳು ಜನತೆಯ ಬದುಕಿನೊಂದಿಗೆ ಚೆಲ್ಲಾ   ಟವಾಡುತ್ತಿದ್ದಾರೆ. ಇದರಿಂದ ಮುಗ್ದ ಜನತೆ ಹೊರ ಬಂದು ಗೊಂದಲ ಮುಕ್ತ ಬದುಕು ಸಾಗಿಸಬೇಕು ಎಂದು ಅವರು ಹೇಳಿದರು.ಪವಾಡ ರಹಸ್ಯ ಬಯಲು ಸಂಸ್ಥೆ  ಗಳು ಗ್ರಾಮೀಣ ಪ್ರದೇಶಗಳಲ್ಲಿ ಸಂಚ ರಿಸಿ ಪವಾಡದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ಮುಗ್ದ ನಾಗರಿಕರಿಗೆ  ಮನವರಿಕೆ ಮಾಡಿಕೊಟ್ಟು ವಿಜ್ಞಾನ ದತ್ತ ಆಕರ್ಷಿಸುವಂತೆ ಮಾಡುವ ಗುರುತರ ಜವಾಬ್ದಾರಿಯನ್ನು ಸಂಸ್ಥೆ ಗಳು ಹೊರಬೇಕು. ವಿನೂತನ ಕಾರ್ಯ ಕ್ರಮಗಳ ಮೂಲಕ ನಾಗರಿಕರಲ್ಲಿ ಬೇರೂರಿರುವ ಮೂಢ ನಂಬಿಕೆಗಳನ್ನು ಹೋಗಲಾಡಿಸಿ, ವಿಜ್ಞಾನ ನೆಲೆ ಯೂರುವಂತೆ ಮಾಡಬೇಕು ಎಂದರು.ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಆಲೂರ ಮಾತನಾಡಿ, ಕೆಲವರು ಜನತೆಯ ಮಾನಸಿಕ ದೌರ್ಬಲ್ಯಗಳನ್ನು ವೇದಿಕೆಯನ್ನಾಗಿಸಿಕೊಂಡು ಪವಾಡಗಳ ನೆಪದಲ್ಲಿ ಸಮಸ್ಯೆಗಳನ್ನು ನಿವಾರಿಸುವು ದಾಗಿ ಹೇಳಿ ಜನರಿಂದ ಹಣ ಕೀಳುವ ಹುನ್ನಾರ ನಡೆಸಿವೆ. ಆದ್ದರಿಂದ ಸಂಸ್ಥೆ ಹಮ್ಮಿಕೊಂಡಿರುವ ಪವಾಡ ರಹಸ್ಯ ಬಯಲು ಕಾರ್ಯಕ್ರಮದಿಂದ ಜನತೆ ಎಚ್ಚೆತ್ತುಕೊಂಡು ಪವಾಡ ಸೃಷ್ಟಿ ಸುವುದಾಗಿ ಹೇಳುವವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ದೀಪಾ ಗೋಯಲ್, ಶಹರಿ ರೋಜಗಾರ ಯೋಜನೆಯ ಅಧ್ಯಕ್ಷ ಬಸಮ್ಮ ಸಾಲಿ ಮಠ, ಡಾ.ಪಾರ್ವತಿಬಾಯಿ ಚವಡಿ, ಕೆ.ಡಿ.ಭಜಂತ್ರಿ, ಎಸ್.ಕೆ.ಮಠದ, ನೇಕಾರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕೋಟ್ರೇಶ ಚಿಲಕಾ, ರಾಜೇ ಸಾಬ ಡಾಲಾಯತ್, ಟಿ.ಡಿ.ಶೀಂಗ್ರಿ, ಭರಮಪ್ಪ ಕುಂಬಾರ, ಶ್ರೀಮತಿ ನಾಗನಳ್ಳಿ ಮುಂತಾದವರು ಉಪಸ್ಥಿತರಿದ್ದರು.ಗಾಣಿಗ ಸದಸ್ಯರ ಸಭೆ

ಗದಗ: ಸ್ಥಳೀಯ ವಿವೇಕಾನಂದ ನಗರದ ಹಾತಲಗೇರಿ ರಸ್ತೆಯಲ್ಲಿರುವ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗ ವರ್ಧಕ ಟ್ರಸ್ಟ್ ಕಟ್ಟಡದಲ್ಲಿ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಜುಲೈ 8 ರಂದು ಮಧ್ಯಾಹ್ನ 1 ಗಂಟೆಗೆ ಕರೆಯಲಾಗಿದೆ.ಸಭೆಯಲ್ಲಿ ರೇಲ್ವೆ ಸಲಹಾ ಸಮಿತಿ ಸದಸ್ಯರಾಗಿರುವ ತೋಟಪ್ಪ ಗಾಣಿಗೇರ ಹಾಗೂ ಸಿದ್ಧಲಿಂಗೇಶ್ವರ ಪಾಟೀಲ ಅವರನ್ನು ಸನ್ಮಾನಿಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಪ್ರತಿಕ್ರಿಯಿಸಿ (+)