ಮೌಢ್ಯ ತೊಲಗಿಸುವ ಶಿಕ್ಷಣ ಬೇಕು

7

ಮೌಢ್ಯ ತೊಲಗಿಸುವ ಶಿಕ್ಷಣ ಬೇಕು

Published:
Updated:

ತೀರ್ಥಹಳ್ಳಿ: ‘ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತೆಗೆದು ಪೋಷಿಸುವ ಕಾರ್ಯ ನಡೆಯಬೇಕು’ ಎಂದು ತಾ.ಪಂ. ಸದಸ್ಯ ಕೆಸ್ತೂರ್ ಮಂಜುನಾಥ್ ಹೇಳಿದರು.

ಪಟ್ಟಣದ ತುಂಗಾ ಮಹಾವಿದ್ಯಾಲಯದ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ವಿದ್ಯಾರ್ಥಿ ವೇದಿಕೆ, ಎನ್‌ಎಸ್‌ಎಸ್ ಘಟಕದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಜಾನಪದ ಕಲೆಗಳು ಇಂದು ನಶಿಸಿ ಹೋಗುತ್ತಿವೆ.ಈ ಮಣ್ಣಲ್ಲಿ ಹುಟ್ಟಿದ ಕಲೆ, ಸಂಸ್ಕೃತಿ ಮುಂದಿನ ಪೀಳಿಗೆಗೆ ಸಾಗಬೇಕು. ಅಂತಹ ಮಹತ್ಕಾರ್ಯಕ್ಕೆ ವಿದ್ಯಾರ್ಥಿ ವೇದಿಕೆಗಳು ಪೂರಕವಾಗಬೇಕು. ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸಿ, ಮೌಢ್ಯಗಳನ್ನು ಕಿತ್ತೆಸೆಯುವ ವಿದ್ಯೆ ಇಂದು ನಮಗೆ ಬೇಕಾಗಿದೆ ಎಂದರು. ರಾಮಚಂದ್ರ ಕೊಪ್ಪಲು ಮಾತನಾಡಿದರು. ಪ್ರಾಂಶುಪಾಲ ಪ್ರೊ.ಎನ್.ಎಂ.ಆರ್. ಸೋಳಂಕಿ ಅಧ್ಯಕ್ಷತೆ ವಹಿಸಿದ್ದರು. ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೌಲಾನಿ ಧರ್ಮಯ್ಯ ಉಪಸ್ಥಿತರಿದ್ದರು. ಅನುಷಾ ಪ್ರಾರ್ಥಿಸಿದರು. ಪ್ರಸನ್ನ ಸ್ವಾಗತಿಸಿದರು. ಅರ್ಚನಾ ವಂದಿಸಿದರು. ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry