ಮೌನದ ಬಣ್ಣ

7

ಮೌನದ ಬಣ್ಣ

Published:
Updated:

ಆರ್.ವೆಂಕಟೇಶ್ ಅಪ್ರತಿಮ ಕಲಾವಿದರು. ಇವರು ತಮ್ಮ ಅಂಗವೈಕಲ್ಯವನ್ನು  (ಕಿವುಡುತನ) ಮೀರಿ ಕಲಾ ಪ್ರಪಂಚದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಇವರ ಚಿತ್ರಕಲಾಕೃತಿಗಳು ಕಲಾ ರಸಿಕರಿಂದ ಅಪಾರ ಮೆಚ್ಚುಗೆ ಪಡೆದಿವೆ.`ಕಲರ್ಸ್‌ ಆಫ್ ಸೈಲೆನ್ಸ್~ ಹೆಸರಿನಡಿಯಲ್ಲಿ ಏರ್ಪಡಿಸಿರುವ ಚಿತ್ರಕಲಾ ಪ್ರದರ್ಶನದಲ್ಲಿ ಆರ್.ವೆಂಕಟೇಶ್ ಅವರ ಅಪರೂಪದ ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಜತೆಗೆ ಮಾರಾಟ ಸಹ ಇದೆ. ಇವರ ಅನುಭವ, ಕನಸು, ತೊಳಲಾಟ ಇವೆಲ್ಲವು ಕ್ಯಾನ್ವಾಸ್ ಮೇಲೆ ಅಭಿವ್ಯಕ್ತಿಗೊಂಡಿವೆ. ದೇಶದಾದ್ಯಂತ ಏಕ ವ್ಯಕ್ತಿ ಪ್ರದರ್ಶನವನ್ನು ಏರ್ಪಡಿಸಿ ಜನ ಮನ್ನಣೆ ಪಡೆದುಕೊಂಡಿದ್ದಾರೆ. ಕಲೆಯಲ್ಲಿ ಸದಾ ಹೊಸತನವನ್ನು ಹುಡುಕುವ ಇವರ ಸೃಜನಶೀಲತೆ ಗುಣದಿಂದಾಗಿ ಅನೇಕ ಉತ್ತಮ ಕಲಾಕೃತಿಗಳು ಮೈದಳೆದಿವೆ.ಅನ್ವೇಷಣೆಯ ಹಾದಿಯಲ್ಲಿ ಮುಂದುವರಿಯುತ್ತಿರುವ ಇವರ ಈ ಗುಣವೇ ಕಲಾಪ್ರಪಂಚದಲ್ಲಿ ಅವರ ಅಸ್ಮಿತೆಯನ್ನು ತೋರ್ಪಡಿಸುತ್ತಿದೆ.ಜನಪದ ಸೊಗಡಿನ ಹಿನ್ನೆಲೆಯುಳ್ಳ ಇವರ ಅಪರೂಪದ ಕಲಾಕೃತಿಗಳು ಚಿತ್ರಕಲಾ ಪರಿಷತ್‌ನಲ್ಲಿ ಅ.11ರ ವರೆಗೆ ಪ್ರದರ್ಶನಗೊಳ್ಳಲಿವೆ. ಸಚಿವ ಎಸ್.ಸುರೇಶ್ ಕುಮಾರ್ ಅವರು ಶನಿವಾರ ಬೆಳಿಗ್ಗೆ 10ಕ್ಕೆ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ.          

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry