`ಮೌನ ಸಾಧನೆ ಮೂಲಕ ದೇವ ಸಾಕ್ಷಾತ್ಕಾರ'

7

`ಮೌನ ಸಾಧನೆ ಮೂಲಕ ದೇವ ಸಾಕ್ಷಾತ್ಕಾರ'

Published:
Updated:

ನವಲಗುಂದ: ಭಕ್ತಿ ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಯೌವನದಲ್ಲಿಯು ಭಕ್ತಿ ಸಾಧನೆ, ಯೋಗ ಸಾಧನೆ ಮಾಡಿ ದೇವ ಸಾಕ್ಷಾತ್ಕಾರ ಪಡೆಯಬಹುದು. ಇದಕ್ಕೆ ಸ್ವಸ್ಥ ದೇಹ ಮತ್ತು ಸದೃಢ ಕಾಯ ಅಗತ್ಯ ಎಂದು ಮಮ್ಮಿಗಟ್ಟಿಯ ಕಲ್ಮೇಶ್ವರ ಆಶ್ರಮದ ಆನಂದ ಸ್ವಾಮೀಜಿ ಹೇಳಿದರು.ಅವರು ಇಲ್ಲಿಯ ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮದಲ್ಲಿ ಜರುಗುತ್ತಿರುವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ 23 ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಸದೃಢ ದೇಹ, ಉತ್ತಮ ಆರೋಗ್ಯ ಇದ್ದಲ್ಲಿ ಅತ್ಯುನ್ನತ ಸಾಧನೆ ಸಾಧ್ಯ. ಯೋಗ, ಧ್ಯಾನ ಮತ್ತು ಪ್ರಾರ್ಥನೆಯ ಮೂಲಕ ಮನಸ್ಸನ್ನು ಏಕಾಗ್ರಗೊಳಿಸಿ ಮುಕ್ತಿ ಸಾಧಿಸಬಹುದು ಎಂದರು.ಪಿಎಸ್‌ಐ ಎನ್.ಸಿ. ಕಾಡದೇವರ ಮಾತನಾಡಿ, ಮಠಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಂದ ಯೋಗ ಸಿದ್ಧಿ ಪಡೆದು ಸಮಾಧಿ ಸ್ಥಿತಿ ಗಳಿಸುವ ಸಾಧನೆ ಮಾಡಲು ಸಾಧ್ಯ. ಇಲ್ಲಿ ಜ್ಞಾನದ ಜೊತೆಗೆ ಬುದ್ಧಿಗೂ ಚಿಕಿತ್ಸೆ ಸಿಗುತ್ತದೆ. ಮನುಷ್ಯನನ್ನು ಧರ್ಮದ ದಾರಿಯಲ್ಲಿ ಸಾಗಲು ಮಾರ್ಗದರ್ಶನ ಮಾಡಿಸುತ್ತದೆ ಎಂದು ಅವರು ತಿಳಿಸಿದರು.ಸಿದ್ಧಿ, ಸಮಾಧಿ, ಯೋಗ ಕುರಿತು ವಚನ ಗಾಯನ ಮತ್ತು ರೂಪಕಗಳು ಬಿತ್ತರಗೊಂಡವು. ನೀನಾಸಂನಲ್ಲಿ ಅಭ್ಯಸಿಸಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಆಚಾರ್ಯ ಅವರ ನಿರ್ದೇಶನದಲ್ಲಿ ನಾವಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಪ್ರದರ್ಶಿಸಿದ ಜಪಾನಿನ ಹಿರೋಶಿಮಾದಲ್ಲಿ ನಡೆದ ಬಾಂಬ್ ದಾಳಿ ಕುರಿತಾದ `ರೆಕ್ಕೆ ಕಟ್ಟುವಿರಾ' ಎಂಬ ಐತಿಹಾಸಿಕ ನಾಟಕ ಎಲ್ಲರ ಗಮನ ಸೆಳೆಯಿತು.

ಎಂ.ಎಚ್. ಚಂದ್ರಣ್ಣವರ, ಟಿ.ವಿ. ಮಹಾಂತೇಶ ಉಪಸ್ಥಿತರಿದ್ದರು. ಎಂ.ಎಸ್. ಶಿರಿಯಣ್ಣವರ ವಚನ ಚಿಂತನ ಮಾಡಿದರು. ಅಡಿವೆಪ್ಪ ಕಮತರ ಪ್ರಾರ್ಥಿಸಿದರು. ಬಿ.ಎಂ. ಚಕ್ರಸಾಲಿ ನಿರೂಪಿಸಿದರು. ಡಿ.ಎಚ್. ಮಳಲಿ ವಂದಿಸಿದರು.ಸಿದ್ಧಾರೂಢಮಠ: ರೂ 6.16 ಲಕ್ಷ ಸಂಗ್ರಹ

ಹುಬ್ಬಳ್ಳಿ:
ನಗರದ ಸಿದ್ಧಾರೂಢಮಠದಲ್ಲಿ ರೂ 6,16,983 ಹಾಗೂ 20 ಡಾಲರ್ ಸಂಗ್ರಹವಾಗಿದೆ. ಸಿದ್ಧಾರೂಢನಗರ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಬಂಧಕ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಬುಧವಾರ ತೆರೆದು ಎಣಿಸಲಾಯಿತು. ಇದು 25 ದಿನಗಳ ಸಂಗ್ರಹ.ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮಿಟಿ ಚೇರಮನ್ ನಾರಾಯಣಪ್ರಸಾದ ಪಾಠಕ್ ವಹಿಸಿದ್ದರು. ಉಪ ಚೇರಮನ್ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಪರ್ವತಗೌಡ ಪಾಟೀಲ, ಧರ್ಮದರ್ಶಿಗಳಾದ ಧರಣೇಂದ್ರ ಜವಳಿ, ಎಸ್.ಜಿ. ಗೀತಾ, ಬಸವರಾಜ ಕಲ್ಯಾಣಶೆಟ್ಟರ, ಯಲ್ಲಪ್ಪ ದೊಡ್ಡಮನಿ, ನಾರಾಯಣಸಾ ಮೆಹರವಾಡೆ, ಮಹೇಂದ್ರ ಸಿಂಘಿ, ನಾರಾಯಣ ನಿರಂಜನ, ಭಕ್ತರಾದ ಪ್ರಭುದೇವ ಹಿಪ್ಪರಗಿ, ಎಸ್.ಬಿ. ನರೇಂದ್ರ, ಶಂಕರಗೌಡ ಸಂಗೊಂದಿ, ಈರಣ್ಣ ಪಾಳೇದ, ಬಸವರಾಜ ಕಾರಡಗಿ ಮೊದಲಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry