ಶನಿವಾರ, ಮೇ 15, 2021
23 °C

ಮೌಲ್ಯಗಳ ಕುಸಿತದಿಂದ ಭ್ರಷ್ಟಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಮಾನವೀಯ ಮೌಲ್ಯಗಳ ಕೊರತೆಯಿಂದಾಗಿ ಭ್ರಷ್ಟಾಚಾರ ಹೆಚ್ಚಿದೆ. ರಾಜಕೀಯ ಗಣ್ಯರು ಅಧಿಕಾರ ಇರುವ ವರೆಗೂ ತಮ್ಮ ಸ್ವಾರ್ಥಕ್ಕಾಗಿ ದುಡಿಯುತ್ತಿದ್ದಾರೆ ಎಂದು ಪ್ರಭಂಜನ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ವಿ.ಎನ್.ರಮೇಶ್ ಕಿಡಿ ಕಾರಿದರು.ಇಲ್ಲಿನ ಶೃಂಗೇರಿ ಶಾರದಾ ಶಾಲೆಯ ಆವರಣದಲ್ಲಿ ಪ್ರಭಂಜನ ಎಜುಕೇಶನ್ ಸೊಸೈಟಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರು ಪುರಸ್ಕಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮುಂದಿನ ಕೆಲವರ್ಷಗಳಲ್ಲಿ ಆಹಾರ ಕ್ರಾಂತಿಯಾಗಲಿದೆ. ಆಹಾರವನ್ನು ಬೆಳೆಯುವ ಮತ್ತು ತಿನ್ನುವ ಹಕ್ಕು ಮಾತ್ರ ದೇವರು ಕೊಟ್ಟಿದ್ದಾನೆ. ಬೇರೊಬ್ಬರ ಅನ್ನವನ್ನು ಕಸಿಯುವ ಮತ್ತು ಅನ್ನವನ್ನು ವ್ಯರ್ಥ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದರು.ಉತ್ತಮ ಸಮಾಜ ಮಾಡುವುದು ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಣ ಪದ್ಧತಿ ಹೇಗೇ ಇದ್ದರೂ ಮಕ್ಕಳಲ್ಲಿ ನೈತಿಕ ಮತ್ತು ತಾತ್ವಿಕ ಮೌಲ್ಯಗಳನ್ನು ಬೆಳೆಸಬೇಕಾದ ಗುರುತರ ಜವಾಬ್ದಾರಿಯು ಶಿಕ್ಷಕನ ಮೇಲಿದೆ ಎಂದರು.ಕಾರ್ಯದರ್ಶಿ ಚಂದ್ರಮುಖಿ ಮಾತನಾಡಿ, ಮಗುವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲು ಬೇಕಾದ ಶಿಕ್ಷಣವನ್ನು ನೀಡುವ ಆದ್ಯ ಕರ್ತವ್ಯ ಶಿಕ್ಷಕರದು. ಹಾಗಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.ಶಿಕ್ಷಕಿ ಸಿ.ಪವಿತ್ರ ಮತ್ತು ಭಾರತಿ ಅವರನ್ನು ಶಾಲುಹೊದಿಸಿ, ಪ್ರಮೀಳಾ ಸ್ಮರಣಾರ್ಥ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಿದರು. ವಿವಿಧ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ರಮ್ಯ ಮತ್ತು ವಿದ್ಯಾರ್ಥಿ ಸುಬ್ರಮಣಿ ಅವರನ್ನು ಅಭಿನಂದಿಸಲಾಯಿತು. ಎಲ್‌ಐಸಿ ಆಫ್ ಇಂಡಿಯಾ ನಡೆಸಿದ ಜಾನಪದ ಗೀತೆಸ್ಪರ್ಧೆ ವಿಜೇತ ಎನ್.ಚೈತ್ರ, ಸುಮ ಮತ್ತು ಪ್ರಬಂಧ ಸ್ಪರ್ಧೆ ವಿಜೇತ ರಮೇಶ್ ಮತ್ತು ಎಲ್.ಮಂಜುನಾಥ್ ಅವರಿಗೆ ಬಹುಮಾನ ವಿತರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.