ಮಂಗಳವಾರ, ಮೇ 18, 2021
24 °C

ಮೌಲ್ಯಮಾಪನ ಕೇಂದ್ರದಲ್ಲಿ ಕೈಗಡಿಯಾರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿರುವ ನಗರದ ಮಹಿಳಾ ಸಮಾಜ ಕಾಲೇಜಿನಲ್ಲಿ ಮಂಗಳವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಯೊಬ್ಬರ ಕಡೆಯವರೆನ್ನಲಾದ ಹಲವರು ಮೌಲ್ಯಮಾಪನ ಶಿಕ್ಷಕರಿಗೆ ಕೈಗಡಿಯಾರಗಳನ್ನು ವಿತರಿಸಿದರು.ಊಟದ ವೇಳೆಯಾದ ಮಧ್ಯಾಹ್ನ 1.30ರ ಸಮಯದಲ್ಲಿ ಶಿಕ್ಷಕರು ಕೇಂದ್ರದ ಕೊಠಡಿಗಳಿಂದ ಹೊರಬಂದ ಸಂದರ್ಭದಲ್ಲಿ ಕೆಲವು ಕಾರ್ಯಕರ್ತರು ಸ್ಪರ್ಧೆ ಆಕಾಂಕ್ಷಿ ಬಿ.ಇ.ಸೌಭಾಗ್ಯ ಅವರ ಮತಯಾಚನೆಯ ಕರಪತ್ರಗಳ ಜೊತೆಗೆ ಶಿಕ್ಷಕರಿಗೆ ಕೈಗಡಿಯಾರಗಳನ್ನು ಹಂಚಲು ಮುಂದಾದರು.ಕರಪತ್ರಗಳ ಜೊತೆಗೆ ಕೈಗಡಿಯಾರಗಳನ್ನು ಹಂಚಲಾಗುತ್ತಿದೆ ಎಂದು ತಿಳಿದ ಕೂಡಲೇ ಹಲವು ಶಿಕ್ಷಕರು ವಾಚ್ ಬಾಕ್ಸ್‌ಗಳನ್ನು ಹಿಡಿದುಕೊಂಡಿದ್ದವರ ಮೇಲೆ ಮುಗಿಬಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.