ಶನಿವಾರ, ಏಪ್ರಿಲ್ 10, 2021
25 °C

ಮೌಲ್ಯಮಾಪನ ಪಾರದರ್ಶಕವಾಗಿಲ್ಲ- ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ ಅಂತಿಮ ವರ್ಷದ (ವಾರ್ಷಿಕ ಪರೀಕ್ಷಾ ಪದ್ಧತಿ) ಅರ್ಥಶಾಸ್ತ್ರ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಪರೀಕ್ಷಾ ಮಂಡಳಿಯ ಅಧ್ಯಕ್ಷರೇ ದೂರಿದ್ದಾರೆ.ಮಂಡಳಿಯ ಅಧ್ಯಕ್ಷ ಮತ್ತು ಪ್ರಶ್ನೆಪತ್ರಿಕೆ ರೂಪಿಸಿದವರ ಗಮನಕ್ಕೆ ತರದೆ ಬೇರೆ ಜಿಲ್ಲೆಗಳಿಂದ ಉಪನ್ಯಾಸಕರನ್ನು ಕರೆಸಿ ಮೌಲ್ಯಮಾಪನ ಮಾಡಿಸಲಾಗುತ್ತಿದೆ. ಇದರಿಂದ ವಿಶ್ವವಿದ್ಯಾಲಯಕ್ಕೆ ಅನಗತ್ಯ ಹೊರೆಯಾಗುತ್ತಿದೆ ಎಂದು ಮಂಡಳಿ ಅಧ್ಯಕ್ಷ ಪ್ರೊ.ಎಂ.ರಾಜಗೋಪಾಲ್ ತಿಳಿಸಿದರು.`ಪರೀಕ್ಷೆಯ ಕಸ್ಟೋಡಿಯನ್ ವಿಜಯಲಕ್ಷ್ಮಿ ಅವರ ಸ್ವಹಿತಾಸಕ್ತಿಯಿಂದ ಈ ರೀತಿ ಆಗಿದೆ. ಇದರ ಹಿಂದೆ ಬೇರೆ ಉದ್ದೇಶ ಇದೆ ಎಂಬ ಗುಮಾನಿ ಬರುತ್ತದೆ. ಕುಲಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.