ಮೌಲ್ಯಯುತ ಶಿಕ್ಷಣ ರೂಢಿಸಿಕೊಳ್ಳಿ: ಧರಣಿದೇವಿ

7

ಮೌಲ್ಯಯುತ ಶಿಕ್ಷಣ ರೂಢಿಸಿಕೊಳ್ಳಿ: ಧರಣಿದೇವಿ

Published:
Updated:
ಮೌಲ್ಯಯುತ ಶಿಕ್ಷಣ ರೂಢಿಸಿಕೊಳ್ಳಿ: ಧರಣಿದೇವಿ

ಮೈಸೂರು: ಶಿಕ್ಷಣವನ್ನು ಪದವಿಗೆ ಮಾತ್ರ ಸೀಮಿತಗೊಳಿಸದೇ ಸಮಾಜ ಮುಖಿ ಮೌಲ್ಯ ವರ್ಧನೆಯ ವ್ಯಕ್ತಿತ್ವ ರೂಢಿಸಿಕೊಳ್ಳುವಂತಹ ಶಿಕ್ಷಣದಲ್ಲಿ ನಿರತರಾಗಿ ಎಂದು ಡಿವೈಎಸ್‌ಪಿ ಧರಣಿದೇವಿ ಮಾಲಗತ್ತಿ ಅವರು ತಿಳಿಸಿದರು.ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿ ಮಂಡಳಿ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಿಗೆ ಶಿಕ್ಷಣ ಮರೀಚಿಕೆಯಾಗಿತ್ತು, ಸಾಮಾನ್ಯ ವರ್ಗದ ಮಹಿಳೆಯರು ಕೂಡ ಶಿಕ್ಷಣದಿಂದ ವಂಚಿತ ರಾಗುತ್ತಿದದ್ದನ್ನು ಮನಗಂಡ ಸರ್ಕಾರಗಳು ಕಾಲ ಕ್ರಮೇಣವಾಗಿ ಮಹಿಳೆಯರಿಗೆ ಸಮರ್ಪಕವಾದ ಶಿಕ್ಷಣ ವನ್ನು ನೀಡಲು ಮುಂದಾಗಿವೆ ಎಂದು ತಿಳಿಸಿದರು.ಪ್ರಾಶುಂಪಾಲ ಪ್ರೊ.ಎಂ.ಬಾಲಚಂದ್ರಗೌಡ `ಹಂಸಧ್ವನಿ~ ವಾರ್ಷಿಕ ಸಂಚಿಕೆ ಬಿಡುಗೊಳಿಸಿ ಮಾತನಾಡಿ ವಿದ್ಯಾರ್ಥಿ ಬದುಕಿನಲ್ಲಿ ಶ್ರಮವಹಿಸಿ ವ್ಯಾಸಂಗಮಾಡುವುದಾದರೆ ಗುರಿ ಮುಟ್ಟಲು ಹೆಚ್ಚು ದಿನಗಳ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಎನ್.ದೇವೇಂದ್ರಕುಮಾರ್ ಅವರು ನೂತನ ವಿದ್ಯಾರ್ಥಿ ಮಂಡಳಿಯಲ್ಲಿ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಮಂಡಳಿ ಅಧ್ಯಕ್ಷೆ ಉಮಾ ಹನಿ, ಉಪಾಧ್ಯಕ್ಷೆ ಸ್ಮಿತಾ ಕೆ.ಪಾಟೀಲ್ ಮತ್ತು ಸ್ಮೃತಿ ಆರ್.ರಾವ್, ಕಾರ್ಯದರ್ಶಿ ಪೂಜಾ ಜೈನ್, ಜಂಟಿ ಕಾರ್ಯದರ್ಶಿಗಳಾಗಿ ಎಸ್.ಅಪರ್ಣ, ಭಾವನ ಹಾಗೂ ವಿದ್ಯಾರ್ಥಿ ಮಂಡಳಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry