`ಮೌಲ್ಯ ಅನಾವರಣಗೊಳಿಸುವ ರಂಗಭೂಮಿ'

7

`ಮೌಲ್ಯ ಅನಾವರಣಗೊಳಿಸುವ ರಂಗಭೂಮಿ'

Published:
Updated:

 


ಧಾರವಾಡ: ಸಮಾಜದ ಸ್ವಾಸ್ಥ್ಯ, ಸಾಮಾಜಿಕ ಅರಿವು, ಜನಪರ ನಿಲುವು, ವೈಚಾರಿಕ ಚಿಂತನೆ, ಪ್ರಗತಿಪರ ಸುಧಾರಣೆ ಮೌಲ್ಯಗಳನ್ನು ಅನಾವರಣಗೊಳಿಸುವ ಮಹತ್ತರ ಕಾರ್ಯವನ್ನು ರಂಗಭೂಮಿ ನಿರಂತರವಾಗಿ ಮಾಡುತ್ತಾ ಶ್ರೇಷ್ಠತೆಯನ್ನು ಪಡೆದಿದೆ ಎಂದು ಹೆಬ್ಬಳ್ಳಿ ಬ್ರಹ್ಮಚೈತನ್ಯ ಆಶ್ರಮದ ದತ್ತಾ ಅವಧೂತರು ನುಡಿದರು.

 

ಗ್ರಾಮದಲ್ಲಿ ಇತ್ತೀಚೆಗೆ ರಂಗಾಯಣ ಏರ್ಪಡಿಸಿದ್ದ ವೃತ್ತಿ ರಂಗಭೂಮಿ ನಾಟಕೋತ್ಸವದ ಅಂಗವಾಗಿ ನಡೆದ 2ನೇ ನಾಟಕದ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, `ರಂಗ ಚಟುವಟಿಕೆಗಳು ಕ್ರಿಯಾಶೀಲಗೊಂಡು ಹೆಚ್ಚೆಚ್ಚು ರಂಗ ಪ್ರದರ್ಶನಗಳು ನಡೆದಾಗ ರಂಗಭೂಮಿ ತನ್ನ ವೈಭವವನ್ನು ಸಾರುತ್ತಾ, ಇನ್ನಷ್ಟು ಸುಭದ್ರಗೊಳ್ಳುತ್ತದೆ. ಆದ್ದರಿಂದ ನಾಟಕಗಳ ಪ್ರಯೋಗಗಳ ಮೂಲಕ ರಂಗ ವಲಯದಲ್ಲಿ ರಂಗ ಸಂಭ್ರಮವನ್ನು ತರುವ ಪ್ರಯತ್ನವನ್ನು ಹಾಗೂ ವೃತ್ತಿರಂಗಭೂಮಿ ನಶಿಸಿ ಹೋಗುತ್ತಿರುವ ಈ ದಿನಗಳಲ್ಲಿ ರಂಗಾಯಣವು ರಂಗಭೂಮಿಯನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ' ಎಂದರು.

 

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಸುಭಾಸ ಎನ್.ನರೇಂದ್ರ, `ನಮ್ಮ ಬದುಕಿನ ವಿವಿಧ ಸ್ತರ, ಅನುಭವ, ಅಭಿವ್ಯಕ್ತಿ ಮತ್ತು ಜೀವನದ ಏರು ಪೇರುಗಳನ್ನು ರಂಗದ ಮೂಲಕ ಅನಾವರಣಗೊಳಿ ಸುವ ಕಲೆಯೇ ನಾಟಕ. ನಾಟಕ ಮನೋರಂಜನೆಯ ಮಾಧ್ಯಮವಾಗದೇ ಇಂದು ಸಾಮಾಜಿಕ ಬದಲಾವಣೆಯ ಸೂತ್ರವೂ ಆಗಿದೆ. ಹೀಗಾಗಿ ಗ್ರಾಮೀಣ ಪರಿಸರದಲ್ಲಿ ಬಹು ಜೋಪಾನವಾಗಿ ರಂಗಪ್ರೀತಿಯನ್ನು ಉಳಿಸಿಕೊಂಡು ಬಂದಿರುವ ಜನತೆಯ ಮುಂದೆ ಈಗ ರಂಗಾಯಣ ಬಂದಿದೆ. ಹವ್ಯಾಸಿ, ವೃತ್ತಿ ರಂಗಭೂಮಿ ಎಂಬ ಭೇದವಲ್ಲದೇ ಒಟ್ಟು ನಾಟಕಗಳ ಮೂಲಕ ಜನಜಾಗೃತಿಯ ಜೊತೆಗೆ ಮನರಂಜನೆಯನ್ನು ಒದಗಿಸಿ ರಂಗ ಕ್ರಾಂತಿಯ ಕಿಡಿ ಹೊತ್ತಿಸುವ ಉದ್ದೇಶ ರಂಗಾಯಣದ್ದು' ಎಂದರು. 

 

ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್.ಚನ್ನೂರ ಸ್ವಾಗತಿಸಿದರು. ರಂಗಭೂಮಿಗೆ ಕೊಡುಗೆ ನೀಡಿದ ಯಲ್ಲಪ್ಪ ಎತ್ತಿನಗುಡ್ಡ, ಬಸವರಾಜ ಹೂಗಾರ, ಕಾಳಪ್ಪ ಬಡಿಗೇರ ಮತ್ತು ಸುಂಕಪ್ಪ ಕುರಿ ಅವರಿಗೆ ರಂಗಗೌರವವನ್ನು ನೀಡಿ ಸನ್ಮಾನಿಸಲಾಯಿತು. 

ನಂತರ ಜೇವರ್ಗಿಯ ವಿಶ್ವಜ್ಯೋತಿ ಪಂ.ಪಂಚಾಕ್ಷರ ನಾಟ್ಯ ಸಂಘದ ಕಲಾವಿದರಿಂದ `ಕುಂಟ ಕೋಣ ಮೂಕ ಜಾಣ' ಎಂಬ ಹಾಸ್ಯಮಯ ನಾಟಕವನ್ನು ಪ್ರದರ್ಶನಗೊಂಡಿತು. 

 

ಆಧಾರ್ ನೀಡಲು ಕ್ರಮ 

ಧಾರವಾಡ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ 34 ಯೋಜನೆಗಳಲ್ಲಿ ಇರುವ ಜಿಲ್ಲೆಯ ಫಲಾನುಭವಿಗ ಳಿಗಾಗಿ ಮಾತ್ರ ಆಧಾರ್ ಹಾಗೂ ಬ್ಯಾಂಕ್ ಖಾತೆ ನೋಂದಣಿಗಾಗಿ ಉಪವಿಭಾಗಾಧಿಕಾರಿಗಳ ನೇತೃತ್ವ ದಲ್ಲಿನ ಅಧಿಕಾರಿಗಳ ತಂಡಗಳು ಜಿಲ್ಲೆಯ ಹೋಬಳಿ ಹಾಗೂ ಹಳ್ಳಿಗಳಿಗೆ ಸಂಚರಿಸಲಿವೆ. 

 

ವೇಳಾಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸುತ್ತಿದ್ದು, ಸಂಬಂಧಿತ ಫಲಾನುಭವಿಗಳಿಗೆ ಸೂಚನೆ ನೀಡಲಾಗು ವುದು. ನಿರ್ದಿಷ್ಟ ಪಡಿಸಿದ 34 ಯೋಜನೆಗಳ ಫಲಾನು ಭವಿಗಳು ಮಾತ್ರ ಸೂಚಿತ ದಿನ ನೋಂದಣಿ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಸೂಚಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry