ಮೌಸಿ ಮತ್ತು ಮೊಬೈಲ್

7

ಮೌಸಿ ಮತ್ತು ಮೊಬೈಲ್

Published:
Updated:

ಮೌಸಿ ಎಂಬ ಇಲಿಗೆ ಅಮ್ಮ

ಮೊಬೈಲ್ ಕೊಟ್ಟರು

ಇನ್ನು ಮುಂದೆ ಇದು ನಿಂದು

ಎಂದು ಹೇಳಿದರು

ಮೊಬೈಲ್ ಕಂಡು ಮೌಸಿಗಂತು

ಖುಷಿಯು ಆಯಿತು

ದಾರ ತಂದು ಕೊರಳಿಗದನು

ಕಟ್ಟಿಕೊಂಡಿತು

ಜಂಬದಿಂದ ಗೆಳೆಯರಿಗೆ

ನಂಬರ್ ಕೊಟ್ಟಿತು

ಪದೇ ಪದೇ ಫೋನು ಮಾಡಿ

ಎಂದು ಹೇಳಿತು

ಮೌಸಿ ಸೆಲ್‌ಗೆ ಮೊದಲ ಬಾರಿ

ಕರೆಯು ಬಂದಿತು

ಟೋನ್ ಕೇಳಿ ಮೌಸಿಯಂತು

ಕುಣಿದುಬಿಟ್ಟಿತು

ಮೊಬೈಲ್ ಕಿವಿಗೆ ಇರಿಸಿಕೊಳ್ಳುತ

ಹಲೋ ಎಂದಿತು

ಕಾಲ್ ಮಾಡಿದ ಕಳ್ಳ ಬೆಕ್ಕು

ನಗುವ ಸೂಸಿತು

ಹಾಯ್ ಮೌಸಿ ಹೇಗಿದೀಯಾ?

ಬೆಕ್ಕು ಕೇಳಿತು

ಬೆಕ್ಕ ಮಾತು ಕೇಳಿ ಇಲಿಗೆ

ಗಂಟಲೊಣಗಿತು

ಕೊರಳಿನಿಂದ ಮೊಬೈಲ್ ತೆಗೆದು

ನೀರಿಗೆಸೆಯಿತು

ಅಬ್ಬ ಜೀವ ಉಳಿಯಿತೆಂದು

ಮನೆಗೆ ನಡೆಯಿತು.

              

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry