ಮ್ಯಾಂಡೊಲಿನ್ ಮಾಂತ್ರಿಕ ಯು.ಶ್ರೀನಿವಾಸ್ ಇನ್ನಿಲ್ಲ

7

ಮ್ಯಾಂಡೊಲಿನ್ ಮಾಂತ್ರಿಕ ಯು.ಶ್ರೀನಿವಾಸ್ ಇನ್ನಿಲ್ಲ

Published:
Updated:

ಚೆನ್ನೈ(ಐಎಎನ್ ಎಸ್): ಮ್ಯಾಂಡೊಲಿನ್ ಮಾಂತ್ರಿಕ ಯು.ಶ್ರೀನಿವಾಸ್(45) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಅನಾರೋಗ್ಯದಿಂದ ನಿಧನರಾದರು.ಯಕೃತ್ತಿನ ಸಮಸ್ಯೆಯಿಂದ ಚಿಕಿತ್ಸೆಗಾಗಿ ಇಲ್ಲಿನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಬೆಳಿಗ್ಗೆ 9.30ಕ್ಕೆ ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಶ್ರೀನಿವಾಸ್ ಅವರು ಆಂಧ್ರ ಪ್ರದೇಶದ ಪಲಕೋಲುವಿನಲ್ಲಿ 1969ರ ಫೆ. 28ರಂದು ಜನಿಸಿದ್ದರು. ತಮ್ಮ ಆರನೇ ವಯಸ್ಸಿಗೆ ಮ್ಯಾಂಡೊಲಿನ್ ವಾದನದ ನಾದಕ್ಕೆ ಆಕರ್ಷಿತರಾದ ಅವರು, ಅದರ ಕಲಿಕೆಯಲ್ಲಿ ತೊಡಗಿದರು. ಮ್ಯಾಂಡೊಲಿನ್ ಇಟಲಿ ದೇಶದ ವಾದ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry