ಮ್ಯಾಕ್‌ಡೋನಾಲ್ಡ್ಸ್ : ವಹಿವಾಟು ವಿಸ್ತರಣೆ

7

ಮ್ಯಾಕ್‌ಡೋನಾಲ್ಡ್ಸ್ : ವಹಿವಾಟು ವಿಸ್ತರಣೆ

Published:
Updated:

ಬೆಂಗಳೂರು:  ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ವಹಿವಾಟನ್ನು ದುಪ್ಪಟ್ಟುಗೊಳಿಸಲು ನಿರ್ಧರಿಸಿರುವ ಮ್ಯಾಕ್‌ಡೋನಾಲ್ಡ್ಸ್,   ಇದಕ್ಕಾಗಿರೂ 200 ಕೋಟಿ ವೆಚ್ಚ ಮಾಡಲಿದೆ.

ರಾಜ್ಯದಲ್ಲಿ ಸದ್ಯಕ್ಕೆ 35ರಷ್ಟಿರುವ ರೆಸ್ಟೊರೆಂಟ್‌ಗಳ ಸಂಖ್ಯೆಯನ್ನು 70ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.ಇದಕ್ಕಾಗಿ ಕರ್ನಾಟಕದಲ್ಲಿರೂ 60 ಕೋಟಿ ವೆಚ್ಚ ಮಾಡಲಾಗುವುದು ಎಂದು ಮ್ಯಾಕ್‌ಡೋನಾಲ್ಡ್ಸ್ ಇಂಡಿಯಾದ ಉಪಾಧ್ಯಕ್ಷ ಅಮಿತ್ ಜಾಟಿಯಾ ಹೇಳಿದ್ದಾರೆ.ಮ್ಯಾಕ್‌ಡೋನಾಲ್ಡ್ಸ್  ಕಳೆದ 15 ವರ್ಷಗಳಲ್ಲಿ ದೇಶದಲ್ಲಿ ಕೌಟುಂಬಿಕ ರೆಸ್ಟೊರೆಂಟ್ ಆಗಿ ಜನಮನ್ನಣೆಗೆ ಪಾತ್ರವಾಗಿರುವುದೇ ಈ ವ್ಯಾಪಕ ಪ್ರಮಾಣದ ವಿಸ್ತರಣೆಗೆ ಉತ್ತೇಜನ ನೀಡಿದೆ. ಈ ವಿಸ್ತರಣೆ ಯೋಜನೆ ಅಂಗವಾಗಿ, ಸಂಸ್ಥೆಯು ದಕ್ಷಿಣ ಭಾರತದಲ್ಲಿ ಅತ್ಯಾಧುನಿಕ ಆಹಾರ ಸಂಸ್ಕರಣಾ ಘಟಕ  ಸ್ಥಾಪಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry