ಭಾನುವಾರ, ಏಪ್ರಿಲ್ 18, 2021
33 °C

ಮ್ಯಾಗ್ಮಾ ಫೈನಾನ್ಸ್ ಕಾರ್ಪ್‌ನಿಂದ ಕಲಾವಿದರಿಗೆ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಕಲೆ, ಸಾಹಿತ್ಯ, ಸಂಸ್ಕೃತಿಯ ಕ್ಷೇತ್ರದಲ್ಲಿ ಅನೇಕ ಪ್ರತಿಭೆಗಳಿಗೆ ಜನ್ಮ ನೀಡಿದೆ. ಈ ಹಿನ್ನೆಲೆಯಲ್ಲಿ ಉದಯೋನ್ಮುಖ ಕಲಾವಿದರನ್ನು ಉತ್ತೇಜಿಸಲು ಮ್ಯಾಗ್ಮಾ ಫೈನಾನ್ಸ್ ಕಾರ್ಪೊರೇಶನ್ ಹಮ್ಮಿಕೊಂಡ ಎರಡು ದಿನಗಳ ಕಾರ್ಯಾಗಾರ ಶನಿವಾರ ಆರಂಭವಾಯಿತು.ಇದರಲ್ಲಿ ಪಾಲ್ಗೊಂಡ ರಾಜ್ಯದ ಕಲಾವಿದರಾದ ಶಂಕರ್ ಕೆ.ವಿ, ಸುಜಿತ್ ಕುಮಾರ್ ಜಿ.ಎಸ್, ಶೇಖರ್ ಎಸ್ ಬಳ್ಳಾರಿ, ಜಿ ಎಲ್ ನೀಲಪ್ಪ ಗೌಡರ್, ಎಂಎನ್ ಪಾಟೀಲ್, ಗಣೇಶ್ ಬಡಿಗೇರ್, ಮಂಜುನಾಥ್ ಎನ್ ಕರಿಗಾರ್, ಮಹೇಶ್ ಎ ಉಮಾತಾರ್, ಪ್ರದೀಪ್ ಕುಮಾರ್ ಡಿಎಂ ಮತ್ತು ಸುಜಯ್ ಎನ್ ಹಿರೇಮಠ ಅವರು ಕ್ಯಾನ್‌ವಾಸನ್ನು ತಮ್ಮ ವಿನೂತನ ಪರಿಕಲ್ಪನೆ, ಬಣ್ಣದಲ್ಲಿ ತುಂಬಿದರು.ಹೆಸರಾಂತ ಕಲಾವಿದೆ ಜಯಶ್ರೀ ಕಾರ್ಯಾಗಾರ ಉದ್ಘಾಟಿಸಿದರು. ಮ್ಯಾಗ್ಮಾ ಫೈನಾನ್ಸ್ ಕಾರ್ಪೊರೇಷನ್ ಪ್ರಧಾನ ಕಾರ್ಯದರ್ಶಿ ಎ ಕೆ ರಾವ್ ಮಾತನಾಡಿ, ಮ್ಯಾಗ್ಮಾ ಸದಾ ಕಲಾ ವಲಯದ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತದೆ.ಕೋಲ್ಕತ್ತದಲ್ಲಿ ಕಳೆದ ಕೆಲವು ವರ್ಷಗಳಿಂದ ಮ್ಯಾಗ್ಮಾ ಪೇಂಟರ್ಸ್‌ ಕಾರ್ಯಾಗಾರ ಆಯೋಜಿಸುತ್ತ ಬಂದಿದೆ.ಮುಂಬರುವ ಸಾಲಿನಲ್ಲಿ ದೇಶದ ಇತರ ಭಾಗಗಳಿಗೂ ವಿಸ್ತರಿಸಲು ನಿರ್ಧರಿಸಿದ್ದೇವೆ. ಇದರಿಂದ ಯುವ ಕಲಾವಿದರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.